ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸಕ್ಕೆ ಮರಳಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು

Last Updated 30 ಜೂನ್ 2020, 8:20 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ಕೊರೊನಾ ವೈರಾಣುವಿನ ಬಿಕ್ಕಟ್ಟಿನಿಂದಾಗಿ ಮೂರು ತಿಂಗಳ ಕಾಲ ಮನೆಯಲ್ಲೇ ಇದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆಟಗಾರರು ಅಭ್ಯಾಸಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರೀಡಾ ಸಚಿವಾಲಯವು ಕ್ರಿಕೆಟಿಗರ ತಾಲೀಮಿಗೆ ಸೋಮವಾರ ಅನುಮತಿ ನೀಡಿತ್ತು. ಹೀಗಾಗಿ ಪುರುಷರ ಹೈ ಪರ್ಫಾರ್ಮೆನ್ಸ್‌ ತಂಡದಲ್ಲಿರುವ 44 ಮಂದಿ ತರಬೇತಿ ಆರಂಭಿಸಿದ್ದಾರೆ.

‘ಎಲ್ಲಾ ಕ್ರಿಕೆಟಿಗರು ತಾವು ವಾಸಿಸುವ ಪ್ರದೇಶದ ಹತ್ತಿರವಿರುವ ಫ್ರಾಂಚೈಸ್‌ ತಂಡಗಳ ಜೊತೆ ಸಣ್ಣ ಗುಂಪುಗಳಾಗಿ ಅಭ್ಯಾಸ ನಡೆಸಲಿದ್ದಾರೆ. ಈ ವೇಳೆ ಎಲ್ಲರೂ ಸಿಎಸ್‌ಎ ಕೋವಿಡ್‌–19 ಸಮಿತಿಯ ಮಾರ್ಗಸೂಚಿಗಳನ್ನು ಪಾಲಿಸಲಿದ್ದಾರೆ’ ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ತಿಳಿಸಿದೆ.

ಆಟಗಾರರ ಅಭ್ಯಾಸದ ವೇಳೆಮಾಧ್ಯಮದವರಿಗೆ ಕ್ರೀಡಾಂಗಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ತರಬೇತಿಯಲ್ಲಿ ಪಾಲ್ಗೊಂಡಿರುವವರು: ಕ್ವಿಂಟನ್‌ ಡಿ ಕಾಕ್‌ (ನಾಯಕ), ಡೀನ್‌ ಎಲ್ಗರ್‌, ಲುಂಗಿ ಗಿಡಿ, ಏಡನ್‌ ಮಾರ್ಕರಮ್‌, ಜೂನಿಯರ್‌ ಡಲಾ, ತೆವುನಿಶ್‌ ಡಿ ಬ್ರ್ಯೂನ್‌, ರಸ್ಸಿ ವಾನ್‌ ಡರ್‌ ಡುಸಾನ್‌, ಶಾನ್‌ ವೊನ್‌ ಬರ್ಗ್‌, ಡ್ವೈನ್‌ ಪ್ರಿಟೋರಿಯಸ್‌, ಹೆನ್ರಿಕ್‌ ಕ್ಲಾಸೆನ್‌, ತೆಂಬಾ ಬವುಮಾ, ರೀಜಾ ಹೆನ್ರಿಕ್ಸ್‌, ಕಗಿಸೊ ರಬಾಡ, ತಬ್ರೈಜ್‌ ಶಂಸಿ, ವಿಯಾನ್‌ ಮುಲ್ಡರ್‌, ಜೊರ್ನ್‌ ಫಾರ್ಚುಯಿನ್‌‌, ಆ್ಯಂಡಿಲೆ ಪಿಶುವಾಯೊ, ಡೇವಿಡ್‌ ಮಿಲ್ಲರ್‌, ಸರೆಲ್‌ ಇರ್ವಿ, ಖಾಯಾ ಜೊಂಡೊ, ಡರಿನ್‌ ಡುಪವಿಲ್ಲೊನ್‌, ಕೇಶವ ಮಹಾರಾಜ, ಸೆನುರನ್‌ ಮುತ್ತುಸಾಮಿ, ಕೀಗನ್‌ ಪೀಟರ್‌ಸನ್‌, ಇಮ್ರಾನ್‌ ತಾಹೀರ್‌, ಲುಥೊ ಸಿಪಾಮ್ಲ, ಎಡ್ವರ್ಡ್‌ ಮೂರ್‌, ಏನ್ರಿಚ್‌ ನೋರ್ಟೆ, ಸಿಸಾಂಡ ಮಗಾಲ, ಗ್ಲೆಂಟನ್‌ ಸ್ಟುರ್‌ಮನ್‌, ಜಾನ್‌ ಜಾನ್‌ ಸ್ಮಟ್ಸ್‌, ರೂಡಿ ಸೆಕೆಂಡ್‌, ಪೀಟ್‌ ವಾನ್‌ ಬಿಲ್ಜೊನ್‌, ರೆನಾರ್ಡ್‌ ವಾನ್‌ ತೊಂಡರ್‌, ಗೆರಾಲ್ಡ್‌ ಕೊಯೆಟ್ಜಿ, ಪೀಟರ್‌ ಮಲಾನ್‌, ಜುಬೇರ್‌ ಹಮ್ಜಾ, ಜಾನೆಮನ್ ಮಲಾನ್‌, ಫಾಫ್‌ ಡು ಪ್ಲೆಸಿ, ಟೋನಿ ಡಿ ಜೊರ್ಜಿ, ಬ್ಯೂರನ್‌ ಹೆನ್ರಿಕ್ಸ್‌, ನ್ಯಾಂಡ್ರೆ ಬರ್ಗರ್‌, ಜಾರ್ಜ್ ಲಿಂಡ್‌ ಹಾಗೂ ಕೈಲ್‌ ವೆರಿನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT