ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾಕ್ಕೆ ಮಲ್ಲಕಂಬ, ಕಳರಿಪಯಟ್ಟು

Last Updated 20 ಡಿಸೆಂಬರ್ 2020, 15:03 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷದ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ನಾಲ್ಕು ದೇಶಿ ಕ್ರೀಡೆಗಳನ್ನು ಸೇರ್ಪಡೆ ಮಾಡಲು ಕೇಂದ್ರ ಕ್ರೀಡಾ ಇಲಾಖೆಯು ನಿರ್ಧರಿಸಿದೆ.

ಮಲ್ಲಕಂಬ, ಘಾತ್ಕಾ, ಕಳರಿಪಯಟ್ಟು ಮತ್ತು ತಾಂಗ್‌ ತಾ ಕ್ರೀಡೆಗಳನ್ನು ಸೇರ್ಪಡೆ ಮಾಡಿದೆ.

’ಭಾರತಕ್ಕೆ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಇದೆ. ಅದರಲ್ಲಿ ದೇಶಿ ಕ್ರೀಡೆಗಳು ಹಲವಾರಿವೆ. ಅವುಗಳನ್ನು ಉಳಿಸಿ, ಬೆಳೆಸಿ ಜನಪ್ರಿಯಗೊಳಿಸುವುದು ನಮ್ಮ ಇಲಾಖೆಯ ಆದ್ಯ ಕರ್ತವ್ಯವಾಗಿದೆ‘ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

’ ಈ ಕ್ರೀಡೆಗಳಿಗೆ ಖೇಲೊ ಇಂಡಿಯಾ ಉತ್ತಮವಾದ ವೇದಿಕೆಯಾಗಿದೆ. ಈ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪಟುಗಳಿಗೆ ಭಾಗವಹಿಸಲು ಉತ್ತಮ ಅವಕಾಶ ಇದಾಗಿದೆ. ಇವುಗಳೊಂದಿಗೆ ಈ ಬಾರಿ ಯೋಗಾಸನ ಕೂಡ ಗಮನ ಸೆಳೆಯಲಿದೆ. ಭವಿಷ್ಯದಲ್ಲಿ ಇನ್ನಷ್ಟು ದೇಶಿ ಕ್ರೀಡೆಗಳನ್ನು ಸೇರ್ಪಡೆ ಮಾಡುವ ಯೋಜನೆ ಇದೆ‘ ಎಂದರು.

ಈಗ ಸೇರ್ಪಡೆಯಾಗಿರುವ ನಾಲ್ಕು ಕ್ರೀಡಗಳು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜನಪ್ರಿಯವಾಗಿವೆ. ಕೇರಳ ರಾಜ್ಯದ ಯುದ್ಧಕಲೆ ಕಳರಿಪಯಟ್ಟು ಸದ್ಯ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಅಂಗಸಾಧನೆ ಕಲೆಯಾಗಿರುವ ಮಲ್ಲಕಂಬವು ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಬಹಳ ಜನಪ್ರಿಯವಾಗಿದೆ. ಘಾತ್ಕಾ ಪಂಜಾಬ್ ರಾಜ್ಯದ ಸಮರಕಲೆಯಾಗಿದೆ. ರಾಜ–ಮಹಾರಾಜರ ಕಾಲದಲ್ಲಿ ಸಿಖ್ ಸೇನಾಪಡೆಗಳು ಈ ಕಲೆಯಿಂದಲೇ ಶತ್ರುಗಳನ್ನು ಸದೆಬಡಿಯುತ್ತಿದ್ದರು.

ಮಣಿಪುರದ ಸಮರ ಕಲೆಯಾಗಿರುವ ತಾಂಗ್‌ ತಾ ಈಶಾನ್ಯ ರಾಜ್ಯಗಳಲ್ಲಿ ನೃತ್ಯವಾಗಿಯೂ ಪ್ರಚಲಿತದಲ್ಲಿದೆ. ಆಯುಧಗಳನ್ನೂ ಇದು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT