ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ಆಲ್‌ರೌಂಡರ್‌ಗಳ ಪಟ್ಟಿ: ಅಗ್ರಸ್ಥಾನಕ್ಕೇರಿದ ಸ್ಟೊಯಿನಿಸ್‌

Published 19 ಜೂನ್ 2024, 13:06 IST
Last Updated 19 ಜೂನ್ 2024, 13:06 IST
ಅಕ್ಷರ ಗಾತ್ರ

ದುಬೈ: ಆಸ್ಟ್ರೇಲಿಯಾದ ಮಾರ್ಕಸ್‌ ಸ್ಟೊಯಿನಿಸ್ ಅವರು ಬುಧವಾರ ಪ್ರಕಟವಾದ ಐಸಿಸಿ ಟಿ20 ಆಲ್‌ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಅಫ್ಗಾನಿಸ್ತಾನದ ಮೊಹಮ್ಮದ್ ನಬಿ ಅವರನ್ನು ಹಿಂದೆಹಾಕಿ ಅಗ್ರಸ್ಥಾನಕ್ಕೇರಿದ್ದಾರೆ.

ಸ್ಟೊಯಿನಿಸ್‌ ಹಾಲಿ ಟಿ20 ವಿಶ್ವಕಪ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ ಉಪಯುಕ್ತ ರನ್‌ಗಳನ್ನೂ ಗಳಿಸಿದ್ದು ಆಸ್ಟ್ರೇಲಿಯಾ ತಂಡ ಸೂಪರ್ ಎಂಟರ ಹಂತ ತಲುಪಲು ನೆರವಾಗಿದ್ದಾರೆ. ನಬಿ ಮೂರು ಸ್ಥಾನಗಳಷ್ಟು ಕೆಳಕ್ಕಿಳಿದು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಲಂಕಾ ನಾಯಕ ವನಿಂದು ಹಸರಂಗ ಮತ್ತು ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್‌ ಬೌಲರ್‌ಗಳು ಬಡ್ತಿ ಪಡೆದಿದ್ದಾರೆ. ಆ ತಂಡದ ಎಡಗೈ ಸ್ಪಿನ್ನರ್ ಅಖೀಲ್ ಹುಸೇನ್ ಅವರು ಆರು ಸ್ಥಾನಗಳನ್ನು ಮೇಲೇರಿ ಎರಡನೇ ಸ್ಥಾನ ತಲುಪಿದ್ದದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್ ಅದಿಲ್‌ ರಶೀದ್ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್‌ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್‌ ಆರು ಸ್ಥಾನ ಬಡ್ತಿಪಡೆದು 11ನೇ ಸ್ಥಾನಕ್ಕೇರಿದರೆ, ಅದೇ ತಂಡದ ಗುಡಕೇಶ್ ಮೋತಿ 16 ಸ್ಥಾನ ಮೇಲೇರಿ 13ನೇ ಸ್ಥಾನದಲ್ಲಿ ನೆಲೆಸಿದ್ದಾರೆ.

ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಫಿಲ್‌ ಸಾಲ್ಟ್‌, ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದು ಸ್ಥಾನಗಳಷ್ಟು ಬಡ್ತಿ ಪಡೆದ ಟ್ರಾವಿಸ್‌ ಹೆಡ್‌ ಐದನೇ ಸ್ಥಾನದಲ್ಲಿದ್ದಾರೆ. ನಿಕೋಲಸ್ ಪೂರನ್ 11ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT