ಬುಧವಾರ, ಮಾರ್ಚ್ 3, 2021
18 °C

ಭಾರತ ಪ್ರವಾಸ: ಇಂಗ್ಲೆಂಡ್ ತಂಡದಲ್ಲಿ ಸ್ಟೋಕ್ಸ್‌, ಆರ್ಚರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಜೊಫ್ರಾ ಆರ್ಚರ್ ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಪ್ರಕಟಿಸಿದ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ನಾಲ್ಕು ಪಂದ್ಯಗಳ ಸರಣಿ ಫೆಬ್ರುವರಿ ಐದರಂದು ಚೆನ್ನೈನಲ್ಲಿ ಆರಂಭವಾಗಲಿದ್ದು 16 ಮಂದಿಯ ತಂಡವನ್ನು ಗುರುವಾರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಶ್ರೀಲಂಕಾ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಟೋಕ್ಸ್ ಮತ್ತು ಆರ್ಚರ್‌ಗೆ ವಿಶ್ರಾಂತಿ ನೀಡಲಾಗಿದೆ. ಮಗುವಿನ ನಿರೀಕ್ಷೆಯಲ್ಲಿರುವ ರೋರಿ ಬರ್ನ್ಸ್‌ ತವರಿನಲ್ಲಿದ್ದಾರೆ. ಜೋ ರೂಟ್ ಮುನ್ನಡೆಸುವ ತಂಡದಲ್ಲಿ ಆರು ಮಂದಿಯನ್ನು ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಒಲಿ ಪಾಪ್ ತಂಡದೊಂದಿಗೆ ಪಯಣಿಸಲಿದ್ದಾರೆ. ಆದರೆ ಫಿಟ್‌ನೆಸ್ ಸಾಬೀತಾದರೆ ಮಾತ್ರ ಆಡುವ ಬಳಗದಲ್ಲಿ ಸೇರಿಸಲಾಗುವುದು ಎಂದು ತಿಳಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಎದುರು ನಡೆದ ಸರಣಿಯಲ್ಲಿ ಅವರಿಗೆ ಭುಜ ನೋವು ಕಾಡಿತ್ತು.

ಶ್ರೀಲಂಕಾದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಆಡುತ್ತಿರುವ ಜಾನಿ ಬೇಸ್ಟೊ, ಸ್ಯಾಮ್ ಕರನ್ ಮತ್ತು ಮಾರ್ಕ್ ವುಡ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದ್ದು ಕ್ರೆಗ್ ಒವರ್ಟನ್ ಅವರನ್ನೂ ಶ್ರೀಲಂಕಾದಿಂದ ವಾಪಸ್ ಕರೆಸಲು ತೀರ್ಮಾನಿಸಲಾಗಿದೆ.

ತಂಡ: ಜೋ ರೂಟ್, ಜೊಫ್ರಾ ಆರ್ಚರ್, ಮೊಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಡಾಮ್ ಬೆಸ್‌, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್‌, ಜೋಸ್ ಬಟ್ಲರ್, ಜಾಕ್ ಕ್ರಾವ್ಲಿ, ಬೆನ್ ಫೋಕ್ಸ್‌, ಡ್ಯಾನ್ ಲಾರೆನ್ಸ್‌, ಜಾಕ್ ಲೀಚ್‌, ಬೆನ್‌ ಸ್ಟೋಕ್ಸ್‌, ಒಲಿ ಸ್ಟೋನ್, ಕ್ರಿಸ್ ವೋಕ್ಸ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು