ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | ನೆದರ್ಲೆಂಡ್‌ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಗಳಿಸಿದ ದಕ್ಷಿಣ ಆಫ್ರಿಕಾ

Published 8 ಜೂನ್ 2024, 14:10 IST
Last Updated 8 ಜೂನ್ 2024, 14:10 IST
ಅಕ್ಷರ ಗಾತ್ರ

ನ್ಯೂಯಾರ್ಕ್: ವೇಗಿ ಒಟ್ನಿಲ್ ಬಾರ್ಥ್‌ಮ್ಯಾನ್ (11ಕ್ಕೆ4) ಅಮೋಘ ಬೌಲಿಂಗ್ ಹಾಗೂ ಡೇವಿಡ್‌ ಮಿಲ್ಲರ್‌ (ಅಜೇಯ 59, 51ಎ) ಅರ್ಧಶತಕದ ನೆರವಿನಿಂದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ’ಡಿ‘ ಗುಂಪಿನಲ್ಲಿ ನೆದರ್ಲೆಂಡ್‌ ಮೇಲೆ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿತು.

ನೌಸಾ ಕೌಂಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 103 ರನ್ ಗಳಿಸಿತು. ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಏಳು ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗೆ 106 ರನ್ ಗಳಿಸಿತು.

ನೆದರ್ಲೆಂಡ್ಸ್ ಸೋಲುವ ಮುನ್ನ ಹೋರಾಟ ತೋರಿತು.  ದಕ್ಷಿಣ ಆಫ್ರಿಕಾ ತಂಡ ಒಂದು ಹಂತದಲ್ಲಿ 12 ರನ್‌ಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತು. ಟ್ರಿಸ್ಟನ್ ಸ್ಟಬ್ಸ್‌ (33) ಹಾಗೂ ಡೇವಿಡ್ ಮಿಲ್ಲರ್ (ಅಜೇಯ 59) ಆಸರೆಯಾದರು.  

ಇದಕ್ಕೂ ಮುನ್ನ ವೇಗಿ ಒಟ್ನಿಲ್ ಬಾರ್ಥ್‌ಮ್ಯಾನ್ ದಾಳಿಗೆ ನೆದರ್ಲೆಂಡ್ಸ್ ತಂಡವು ಅಲ್ಪ ಮೊತ್ತಕ್ಕೆ ಕುಸಿಯಿತು.  ಸೈಬ್ರ್ಯಾಂಡ್ ಇಂಗೆಲ್‌ಬ್ರೆಕ್ಟ್ (40; 45ಎ) ಬಿಟ್ಟರೆ ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು.  ಬಾರ್ಥ್‌ಮ್ಯಾನ್ ಮತ್ತು ಮಾರ್ಕೊ ಯಾನ್ಸನ್ ಆರಂಭಿಕ ಹಂತದಲ್ಲಿಯೇ ನೀಡಿದ ಪೆಟ್ಟಿನಿಂದಾಗಿ ನೆದರ್ಲೆಂಡ್ಸ್ ತಂಡವು 48 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತು. 

ಸಂಕ್ಷಿಪ್ತ ಸ್ಕೋರು: ನೆದರ್ಲೆಂಡ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 103 (ಸೈಬ್ರ್ಯಾಂಡ್ ಇಂಗೆಲ್‌ಬ್ರೆಕ್ಟ್‌ 40, ವ್ಯಾನ್ ಬೀಕ್ 23, ಮಾರ್ಕೊ ಯಾನ್ಸನ್ 20ಕ್ಕೆ2, ಒಟ್ನಿಲ್ ಬಾರ್ಥ್ ಮ್ಯಾನ್ 11ಕ್ಕೆ4, ಆ್ಯನ್ರಿಚ್ ನಾಕಿಯಾ 19ಕ್ಕೆ2) ದಕ್ಷಿಣ ಆಫ್ರಿಕಾ:  18.5 ಓವರ್‌ಗಳಲ್ಲಿ 6 ವಿಕೆಟ್‌ಗೆ 106 (ಟ್ರಿಸ್ಟನ್ ಸ್ಟಬ್ಸ್‌ 33, ಡೇವಿಡ್‌ ಮಿಲ್ಲರ್ ಅಜೇಯ 59, ವಿವಿಯನ್ ಕಿಂಗ್ಮಾ 12ಕ್ಕೆ2, ವ್ಯಾನ್ ಬೀಕ್ 22ಕ್ಕೆ2)ಪಂದ್ಯ ಶ್ರೇಷ್ಠ: ಡೇವಿಡ್ ಮಿಲ್ಲರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT