ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಶಿವಂ ಚೌಧರಿ ಆಕರ್ಷಕ ಶತಕ

7

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಶಿವಂ ಚೌಧರಿ ಆಕರ್ಷಕ ಶತಕ

Published:
Updated:

ಬೆಂಗಳೂರು: ಶಿವಂ ಚೌಧರಿ (121; 213ಎ, 14ಬೌಂ, 2ಸಿ) ಅವರ ಆಕರ್ಷಕ ಶತಕದ ಬಲದಿಂದ ಉತ್ತರ ‍ಪ್ರದೇಶ ಸಂಸ್ಥೆ ತಂಡ ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಗುಜರಾತ್‌ ಸಂಸ್ಥೆ ಎದುರಿನ ಫೈನಲ್‌ನಲ್ಲಿ ಬೃಹತ್‌ ಮೊತ್ತದತ್ತ ಮುನ್ನಡೆದಿದೆ.

ಆಲೂರಿನ ಎರಡನೆ ಮೈದಾನದಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ಉತ್ತರ ಪ್ರದೇಶ ಸಂಸ್ಥೆ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 89 ಓವರ್‌ಗಳಲ್ಲಿ 3 ವಿಕೆಟ್‌ಗೆ 320ರನ್‌ ದಾಖಲಿಸಿದೆ.

ಬ್ಯಾಟಿಂಗ್‌ ಆರಂಭಿಸಿದ ಉತ್ತರ ಪ್ರದೇಶ ತಂಡಕ್ಕೆ ಶಿವಂ ಮತ್ತು ಉಮಂಗ್‌ ಶರ್ಮಾ (46) ಭದ್ರ ಅಡಿಪಾಯ ಹಾಕಿಕೊಟ್ಟರು. ಇವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 206 ಎಸೆತಗಳಲ್ಲಿ 112ರನ್‌ ದಾಖಲಿಸಿದರು.

ಉಮಂಗ್‌ ಔಟಾದ ನಂತರ ಪ್ರಿಯಂ ಗರ್ಗ್‌ (ಬ್ಯಾಟಿಂಗ್‌ 97) ಮತ್ತು ಶಿವಂ ತಂಡದ ಮೊತ್ತ ಹೆಚ್ಚಿಸಿದರು. ಇವರು ಎರಡನೆ ವಿಕೆಟ್‌ಗೆ 227 ಎಸೆತಗಳಲ್ಲಿ 135ರನ್‌ ಕಲೆಹಾಕಿದರು.

ಸಂಕ್ಷಿಪ್ತ ಸ್ಕೋರ್‌: ಉತ್ತರ ಪ್ರದೇಶ ಸಂಸ್ಥೆ: ಮೊದಲ ಇನಿಂಗ್ಸ್‌, 89 ಓವರ್‌ಗಳಲ್ಲಿ 3 ವಿಕೆಟ್‌ಗೆ 320 (ಶಿವಂ ಚೌಧರಿ 121, ಉಮಂಗ್‌ ಶರ್ಮಾ 46, ಪ್ರಿಯಂ ಗರ್ಗ್‌ ಬ್ಯಾಟಿಂಗ್‌ 97, ಅಕ್ಷದೀಪ್‌ ನಾಥ್‌ ಬ್ಯಾಟಿಂಗ್‌ 40; ರುಶ್‌ ಕಲಾರಿಯಾ 59ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !