ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್: ಟಿಕೆಟ್ ಮಾರಾಟ 19ರಿಂದ

ಕಾಳಸಂತೆಗೆ ಕಡಿವಾಣ ಹಾಕುವುದು ಪೊಲೀಸರ ಹೊಣೆ: ಕೆಎಸ್‌ಸಿಎ
Last Updated 15 ಫೆಬ್ರುವರಿ 2019, 18:25 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 27ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟ್ವೆಂಟಿ–20 ಪಂದ್ಯದ ಪ್ರವೇಶದ ಟಿಕೆಟ್‌ಗಳ ಮಾರಾಟವು 19ರಿಂದ ಆರಂಭವಾಗಲಿದೆ. ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಮಾರಾಟ ಆರಂಭವಾಗಲಿದೆ. ₹ 750 ರಿಂದ 10 ಸಾವಿರದವರೆಗಿನ ವಿವಿಧ ಸ್ಟ್ಯಾಂಡ್‌ಗಳ ಟಿಕೆಟ್‌ಗಳ ಮಾರಾಟ ನಡೆಯಲಿದೆ.

ಈ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಣೆ ನೀಡಿದೆ. ₹ 750ರ ಟಿಕೆಟ್‌ಗಳನ್ನು ಒಬ್ಬರಿಗೆ ಒಂದು ಮತ್ತು ಉಳಿದ ಶ್ರೇಣಿಯ ಟಿಕೆಟ್‌ಗಳನ್ನು ಒಬ್ಬರಿಗೆ ಎರಡು ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.

‘ಬೇರೆ ಊರುಗಳಲ್ಲಿರುವ ಕ್ರೀಡಾಂಗಣಗಳಿಗಿಂತ ಇಲ್ಲಿಯ ಟಿಕೆಟ್‌ ದರ ಹೆಚ್ಚು. ಊಟ, ತಿಂಡಿ, ನೀರು ಕೂಡ ಕೊಡುವುದಿಲ್ಲ’ ಎಂದು ಕೆಲವು ಕ್ರಿಕೆಟ್‌ಪ್ರೇಮಿಗಳು ಈ ಪ್ರಕಟಣೆಗೆ ಪ್ರತಿಕ್ರಿಯಿಸಿದ್ದಾರೆ. ‘ಒಬ್ಬರಿಗೆ ಒಂದೇ ಟಿಕೆಟ್‌ ಕೂಡ ಸೂಕ್ತವಲ್ಲ’ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಕಾಳಸಂತೆ ತಡೆಯುವುದು ಪೊಲೀಸರ ಕೆಲಸ

‘ಸಂಸ್ಥೆಯ ಒಳಗಿನಿಂದ ಕಾಳಸಂತೆಗೆ ಕುಮ್ಮಕ್ಕು ಕೊಡುವ ಯಾವುದೇ ಅವಕಾಶವೂ ಇಲ್ಲ. ನಮ್ಮ ಎಲ್ಲ ಸದಸ್ಯರಿಗೂ ತಲಾ ಎರಡು ಟಿಕೆಟ್ ಮಾತ್ರ ಕೊಡುತ್ತೇವೆ. ಕೌಂಟರ್‌ ಸೇಲ್‌ನಲ್ಲಿಯೂ ₹750 ಟಿಕೆಟ್‌ ಒಬ್ಬರಿಗೆ ಒಂದು ಮಾತ್ರ. ಉಳಿದ ಶ್ರೇಣಿಯ ಟಿಕೆಟ್‌ಗಳು ತಲಾ ಎರಡು ಮಾತ್ರ ನೀಡುತ್ತಿದ್ದೇವೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಕ್ರೀಡಾಂಗಣದಿಂದ ಹೊರಗೆ ನಡೆಯುವ ಕಾಳಸಂತೆ ಟಿಕೆಟ್ ಮಾರಾಟವನ್ನು ತಡೆಯುವುದು ಪೊಲೀಸರಿಗೆ ಬಿಟ್ಟ ಕೆಲಸ. ನಮ್ಮಿಂದ ಯಾವುದೇ ಲೋಪವಿಲ್ಲ’ ಎಂದು ಸಂಸ್ಥೆಯ ಹಂಗಾಮಿ ಕಾರ್ಯದರ್ಶಿ ಸುಧಾಕರ ರಾವ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಯಾವುದೇ ಟಿಕೆಟ್‌ ದರಗಳನ್ನು ಹೆಚ್ಚಿಸಿಲ್ಲ. ಹಳೆಯ ದರವನ್ನೇ ಮುಂದುವರಿಸಿದ್ದೇವೆ. ಶೇ 50ರಷ್ಟು ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಲಿವೆ. ₹7500 ಮತ್ತು ₹ 10 ಸಾವಿರ ಬೆಲೆಯ ಟಿಕೆಟ್‌ಗಳಿಗೆ ಆಹಾರ ನೀಡುವ ಸೌಲಭ್ಯವೂ ಇದೆ. ಉಳಿದ ಗ್ಯಾಲರಿಗಳಲ್ಲಿ ಫುಡ್‌ ಕೌಂಟರ್‌ಗಳು ಇರುತ್ತವೆ. ಪ್ರೇಕ್ಷಕರು ಖರೀದಿಸಬಹುದು’ ಎಂದು ಸ್ಪಷ್ಟಪಡಿಸಿದರು.

***

ಟಿಕೆಟ್‌ಗಳ ದರಪಟ್ಟಿ

ಸ್ಟ್ಯಾಂಡ್ ದರ (₹)

ಪಿ ಕಾರ್ಪೊರೆಟ್ 10000

ಪೆವಿಲಿಯನ್ ಟೆರೆಸ್ 7500

ಈ ಎಕ್ಸಿಕ್ಯುಟಿವ್ 5000

ಗ್ರ್ಯಾಂಡ್ ಟೆರೆಸ್ 4000

ಎನ್‌ ಸ್ಟ್ಯಾಂಡ್ 3500

ಡಿ ಕಾರ್ಪೊರೆಟ್ 2500

ಎ ಸ್ಟ್ಯಾಂಡ್ 1500

ಬಿ ಲೋಯರ್ 1500

ಬಿ ಅಪ್ಪರ್ 1500

* ಒಬ್ಬರಿಗೆ ಎರಡು ಟಿಕೆಟ್‌ ಮಾತ್ರ

ಜಿ ಅಪ್ಪರ್ 750

ಜಿ ಲೋಯರ್ ಒನ್ 750

ಜಿ ಲೋಯರ್ ಟು 750

*ಒಬ್ಬರಿಗೆ ಒಂದೇ ಟಿಕೆಟ್

ಕೌಂಟರ್‌ ಮಾರಾಟ: ಫೆಬ್ರುವರಿ 19 ರ ಬೆಳಿಗ್ಗೆ 10ರಿಂದ

ಆನ್‌ಲೈನ್ ಖರೀದಿಗಾಗಿ; https://www.ksca.cricket

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT