ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನಗತಿಯ ಪಿಚ್‌ ಸಿದ್ಧಪಡಿಸುವಾಗ ಎಚ್ಚರವಿರಲಿ: ರಾಬಿನ್ ಉತ್ತಪ್ಪ

Last Updated 29 ಮಾರ್ಚ್ 2019, 18:31 IST
ಅಕ್ಷರ ಗಾತ್ರ

ನವದೆಹಲಿ: ನಿಧಾನಗತಿಯ ಪಿಚ್ ಸಿದ್ಧಪಡಿಸುವುದು ತಪ್ಪಲ್ಲ. ಆದರೆ ಐಪಿಎಲ್‌ನ ಮೊದಲ ಪಂದ್ಯ ನಡೆದ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಂಥ ಪಿಚ್ ಸಿದ್ಧಪಡಿಸುವಾಗ ಎಚ್ಚರವಾಗಿರಬೇಕು ಎಂದು ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಆಟಗಾರ ರಾಬಿನ್ ಉತ್ತಪ್ಪ ಹೇಳಿದರು.

ಚೆನ್ನೈನಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 70 ರನ್‌ಗಳಿಗೆ ಆಲೌಟ್‌ ಆಗಿತ್ತು. ಸುಲಭ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ಪ್ರಯಾಸದಿಂದ ಗೆದ್ದಿತ್ತು.

ಈ ಬಗ್ಗೆ ಮಾತನಾಡಿದ ಉತ್ತಪ್ಪ ‘ಐಪಿಎಲ್‌ ಟೂರ್ನಿಯಲ್ಲಿ ರನ್ಗಳು ಹರಿದು ಬರಲು ಪ್ರೇಕ್ಷಕರು ಇಷ್ಟಪಡುತ್ತಾರೆ. ಇದಕ್ಕೆ ನಿಧಾನಗತಿಯ ಪಿಚ್‌ಗಳು ಮಾರಕ’ ಎಂದರು.

‘ಟ್ವೆಂಟಿ–20 ಕ್ರಿಕೆಟ್ ಮನರಂಜನೆ ಅಲ್ಲ. ಆದರೂ ಅಲ್ಲಿ ಪ್ರೇಕ್ಷಕರ ದೃಷ್ಟಿಯಿಂದ ನೋಡಬೇಕಾದ ಅಗತ್ಯವಿದೆ. ಬ್ಯಾಟ್ಸ್‌ಮನ್‌ ಸಿಕ್ಸರ್‌ ಮತ್ತು ಬೌಂಡರಿಗಳನ್ನು ಬಾರಿಸುವುದನ್ನು ನೋಡಲು ಅವರು ಅಲ್ಲಿಗೆ ಬರುತ್ತಾರೆ. ಫಿರೋಜ್ ಷಾ ಕೋಟ್ಲಾ ಅಂಗಣದ ಪಿಚ್‌ ಕೂಡ ನಿಧಾನಗತಿಯದ್ದಾಗಿದ್ದು ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT