ಶನಿವಾರ, ಸೆಪ್ಟೆಂಬರ್ 21, 2019
21 °C

ಕಿಂಗ್ಸ್‌ಗೆ ಇನ್ನು ವರುಣ್‌ ಚಕ್ರವರ್ತಿ ಸೇವೆ ಇಲ್ಲ

Published:
Updated:

ಮೊಹಾಲಿ (ಪಿಟಿಐ): ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಲೆಗ್‌ ಸ್ಪಿನ್ನರ್ ವರುಣ್ ಚಕ್ರವರ್ತಿ ಕಿಂಗ್ಸ್ ಇಲೆವನ್‌ ತಂಡದ ಮುಂದಿ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ.

27 ವರ್ಷದ, ತಮಿಳುನಾಡಿನ ವರುಣ್‌ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಏಕೈಕ ಪಂದ್ಯದಲ್ಲಿ ಆಡಿದ್ದರು. 35 ರನ್‌ಗಳಿಗೆ ಒಂದು ವಿಕೆಟ್ ಕಬಳಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಎದುರು ಚೆನ್ನೈನಲ್ಲಿ ನಡೆದಿದ್ದ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದ್ದ ವೇಳೆ ಅವರ ಕೈಬೆರಳಿಗೆ ಗಾಯವಾಗಿತ್ತು.

‘ವರುಣ್‌ ಗುಣಮುಖರಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಸಿಗಲಿಲ್ಲ. ಆದ್ದರಿಂದ ವಾಪಸ್ ತೆರಳುವಂತೆ ಅವರಿಗೆ ಸೂಚಿಸಲಾಗಿದೆ’ ಎಂದು ತಂಡದ ಪ್ರಕಟಣೆ ತಿಳಿಸಿದೆ.

Post Comments (+)