ಗುರುವಾರ , ನವೆಂಬರ್ 14, 2019
19 °C
ಕ್ರಿಕೆಟ್‌ ಟೂರ್ನಿ

ವಿಜಯ್‌ ಹಜಾರೆ ಟ್ರೋಫಿ : ವಿನಯ್‌ ಮಿಂಚು: ಪುದುಚೇರಿ ಜಯಭೇರಿ

Published:
Updated:
Prajavani

ಡೆಹ್ರಾಡೂನ್: ಅನುಭವಿ ವೇಗದ ಬೌಲರ್‌ ಕನ್ನಡಿಗ ವಿನಯ್‌ ಕುಮಾರ್‌ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದರು. ಅವರ ಪ್ರಭಾವಿ ಬೌಲಿಂಗ್‌ ನೆರವಿನಿಂದ ಪುದುಚೇರಿ ತಂಡವು ಸೋಮವಾರ 9 ವಿಕೆಟ್‌ಗಳಿಂದ ಮಣಿಪುರ ತಂಡವನ್ನು ಮಣಿಸಿತು. ಇದರೊಂದಿಗೆ ಆ ತಂಡ ವಿಜಯ್‌ ಹಜಾರೆ ಟ್ರೋಫಿ ಪ್ಲೇಟ್‌ ಗ್ರೂಪ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿತು.

ವಿನಯ್‌ (21ಕ್ಕೆ 4) ಅವರು ಪಂದ್ಯದ ಆರಂಭದಲ್ಲೇ ಎದುರಾಳಿ ತಂಡದ ಮೂರು ವಿಕೆಟ್‌ ಉರುಳಿಸಿ ಆಘಾತ ನೀಡಿದರು. 19 ರನ್‌ ಗಳಿಸಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಣಿಪುರಕ್ಕೆ ಪ್ರಿಯಜಿತ್‌ ಸಿಂಗ್‌ (44) ಅಲ್ಪ ಆಸರೆ ಒದಗಿಸಿದರು. ಆದರೆ 30.1 ಓವರ್‌ಗಳಲ್ಲಿ 109 ರನ್ನಿಗೆ ಆ ತಂಡದ ಎಲ್ಲ ವಿಕೆಟ್‌ ಉರುಳಿದವು. ವಿನಯ್‌ಗೆ ಬೆಂಬಲ ನೀಡಿದ ಸ್ಪಿನ್ನರ್‌ ಸಾಗರ್‌ ಉದೇಶಿ (26ಕ್ಕೆ3) ಬೌಲಿಂಗ್‌ನಲ್ಲಿ ಮಿಂಚಿದರು. ಗೆಲುವಿನ ಗುರಿ ಬೆನ್ನತ್ತಿದ ಪುದುಚೇರಿಗೆ ಅರುಣ್‌ ಕಾರ್ತಿಕ್‌ (ಔಟಾಗದೆ 67, 43 ಎಸೆತ) ಬ್ಯಾಟಿಂಗ್‌ನಲ್ಲಿ ಬಲ ನೀಡಿದರು. 16.1 ಓವರ್‌ಗಳಲ್ಲಿ ತಂಡ ಗುರಿ ತಲುಪಿತು. ಬೆಂಗಳೂರು ಹೊರವಲಯದ ಆಲೂರಿನಲ್ಲಿ ನಡೆದ ಪಂದ್ಯದಲ್ಲಿ ಛತ್ತೀಸಗಡ ತಂಡ 24 ರನ್‌ಗಳಿಂದ ಹೈದರಾಬಾದ್‌ ಮೇಲೆ
ಜಯಗಳಿಸಿತು. ಸಂಕ್ಷಿಪ್ತ ಸ್ಕೋರು: ಕಾಸಿಗಾ ಶಾಲಾ ಕ್ರಿಕೆಟ್‌ ಮೈದಾನ ಡೆಹ್ರಾಡೂನ್‌: ಮಣಿಪುರ 30.1 ಓವರ್‌ಗಳಲ್ಲಿ 109 (ಪ್ರಿಯಜಿತ್ ಸಿಂಗ್‌ 44; ವಿನಯ್‌ ಕುಮಾರ್‌ 21ಕ್ಕೆ4, ಸಾಗರ್‌ ಉದೇಶಿ 26ಕ್ಕೆ 3). ಪುದುಚೇರಿ: 16.1 ಓವರ್‌ಗಳಲ್ಲಿ 1 ವಿಕೆಟ್‌ಗೆ 115 (ಅರುಣ್‌ ಕಾರ್ತಿಕ್‌ ಔಟಾಗದೆ 67). ಫಲಿತಾಂಶ ಪುದುಚೇರಿಗೆ 9 ವಿಕೆಟ್‌ ಜಯ.

ಇತರ ಪಂದ್ಯಗಳ ಫಲಿತಾಂಶಗಳು: ಆಲೂರು ಕ್ರಿಕೆಟ್‌ ಮೈದಾನ, ಬೆಂಗಳೂರು: ಛತ್ತೀಸಗಡ 23 ಓವರ್‌ಗಳಲ್ಲಿ 5 ವಿಕೆಟ್‌ಗೆ 171 (ರಿಷಭ್‌ ತಿವಾರಿ 66, ಶಶಾಂಕ್‌ ಸಿಂಗ್‌ 31; ಚಮಾ ಮಿಲಿಂದ್‌ 46ಕ್ಕೆ 2) ಹೈದರಾಬಾದ್‌ 19.5 ಓವರ್‌ಗಳಲ್ಲಿ 147 (ತಿಲಕ್‌ ವರ್ಮಾ 41; ವೀರ್‌ ಪ್ರತಾಪ್‌ ಸಿಂಗ್‌ 23ಕ್ಕೆ4) ಛತ್ತೀಸಗಡಕ್ಕೆ 24 ರನ್‌ಗಳ ಜಯ. ಆಲೂರು ಕ್ರಿಕೆಟ್‌ ಮೈದಾನ, ಬೆಂಗಳೂರು: ಗೋವಾ 9 ವಿಕೆಟ್‌ಗೆ 154 (ವೈಭವ್‌ ಗೋವೇಕರ್‌ 50, ಸಿ.ಎಂ. ಗೌತಮ್‌ 46; ಜೈದೇವ್‌ ಉನದ್ಕತ್‌ 28ಕ್ಕೆ3) ಸೌರಾಷ್ಟ್ರ 26.5 ಓವರ್‌ಗಳಲ್ಲಿ 5 ವಿಕೆಟ್‌ಗೆ 157 (ಸಮರ್ಥ್‌ ವ್ಯಾಸ್‌ 34, ಪ್ರೇರಕ್‌ ಮಂಕಡ್‌ 41; ಲಕ್ಷ್ಯ ಗರ್ಗ್‌ 39ಕ್ಕೆ 2) ಫಲಿತಾಂಶ: ಸೌರಾಷ್ಟ್ರಕ್ಕೆ 5 ವಿಕೆಟ್‌ ಗೆಲುವು.

ಜಸ್ಟ್‌ ಕ್ರಿಕೆಟ್‌ ಅಕಾಡೆಮಿ ಮೈದಾನ, ಬೆಂಗಳೂರು: ಕೇರಳ: 48.4 ಓವರ್‌ಗಳಲ್ಲಿ 199 (ರಾಬಿನ್‌ ಉತ್ತಪ್ಪ 43 ಎಂ.ಡಿ.ನಿಧೀಶ್‌ 40; ಶಾರ್ದೂಲ್‌ ಠಾಕೂರ್‌ 40ಕ್ಕೆ 3) ಮುಂಬೈ: 38.2 ಓವರ್‌ಗಳಲ್ಲಿ 2 ವಿಕೆಟ್‌ಗೆ 202 (ಯಶಸ್ವಿ ಜೈಸ್ವಾಲ್‌ 122, ಆದಿತ್ಯ ತಾರೆ 67; ವಿಷ್ಣು ವಿನೋದ್‌ 16ಕ್ಕೆ 2): ಫಲಿತಾಂಶ: ಮುಂಬೈ ತಂಡಕ್ಕೆ 8 ವಿಕೆಟ್‌ ಜಯ.

 

ಪ್ರತಿಕ್ರಿಯಿಸಿ (+)