ಬೆಂಗಳೂರು: ಮಧ್ಯಪ್ರದೇಶ ತಂಡವು ಇಲ್ಲಿನ ಶಹೀದ್ ವೀರನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್ ಗುಂಪಿನ ಪಂದ್ಯದಲ್ಲಿ ಕರ್ನಾಟಕ ವಿರುದ್ಧ 86 ಓವರುಗಳಲ್ಲಿ 6 ವಿಕೆಟ್ಗೆ 269 ರನ್ ಗಳಿಸಿತು. ಮೊದಲ ದಿನ ಎರಡೂ ತಂಡಗಳು ಗೌರವ ಹಂಚಿಕೊಂಡವು.

ಕರ್ನಾಟಕದ ಪರ ದಾಳಿ ಆರಂಭಿಸಿದ ವಿಕ್ರಮ್ (77ಕ್ಕೆ) ಮತ್ತು ಸಮರ್ಥ ಕುಲಕರ್ಣಿ (34ಕ್ಕೆ2) ಅವರು ನಿಯಮಿತವಾಗಿ ವಿಕೆಟ್ಗಳನ್ನು ಪಡೆದರು. ಮಧ್ಯಪ್ರದೇಶ ತಂಡಕ್ಕೆ ಆರ್ಣವ್ ಘೋಡಗಾಂವಕರ್ (71, 135ಎ, 4x11), ಅಥರ್ವ ಪಟೇಲ್ (ಅಜೇಯ 67) ಮತ್ತು ಕುಶಾಗ್ರ ನಗರ್ (62) ಅವರು ಅರ್ಧ ಶತಕಗಳ ಮೂಲಕ ಆಸರೆಯಾದರು.

ಮಧ್ಯಪ್ರದೇಶ ತಂಡವು ಒಂದು ಹಂತದಲ್ಲಿ 101 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಆರ್ಣವ್ ಮತ್ತು ಅಥರ್ವ ಐದನೇ ವಿಕೆಟ್ಗೆ 92 ರನ್ ಸೇರಿಸಿ ಗಮನಾರ್ಹ ಚೇತರಿಕೆ ನೀಡಿದರು. ಅಥರ್ವ ಮತ್ತು ರಿತಿಕ್ ಪರಾವ್ (ಬ್ಯಾಟಿಂಗ್ 28) ಅವರು ಮುರಿಯದ ಏಳನೇ ವಿಕೆಟ್ಗೆ 52 ರನ್ ಸೇರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮಧ್ಯಪ್ರದೇಶ: 86 ಓವರುಗಳಲ್ಲಿ 6ಕ್ಕೆ 269 (ಕುಶಾಗ್ರ ನಗರ್ 62, ಆರ್ಣವ್ ಘೋಡಗಾಂವಕರ 71, ಅಥರ್ವ್ ಔಟಾಗದೇ 67, ರಿತಿಕ್ ಪರಾಬ್ ಔಟಾಗದೇ 28; ವಿಕ್ರಮ್ 77ಕ್ಕೆ2, ಸಮರ್ಥ್ ಎಂ.ಕುಲಕರ್ಣಿ 34ಕ್ಕೆ2) ವಿರುದ್ಧ ಕರ್ನಾಟಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.