ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಲುಂಗಿ ಬಿರುಗಾಳಿಗೆ ವಿಂಡೀಸ್ ದೂಳೀಪಟ

Last Updated 11 ಜೂನ್ 2021, 14:36 IST
ಅಕ್ಷರ ಗಾತ್ರ

ಸೇಂಟ್ ಲೂಸಿಯಾ: ದಕ್ಷಿಣ ಆಫ್ರಿಕಾದ ಲುಂಗಿ ಗಿಡಿ (19ಕ್ಕೆ 5) ಬಿರುಗಾಳಿ ವೇಗದ ಬೌಲಿಂಗ್ ಮುಂದೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಪಡೆಯು ದೂಳೀಪಟವಾಯಿತು.

ಗ್ರಾಸ್‌ ಐಲೆಟ್‌ನ ಡ್ಯಾರೆನ್ ಸಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್‌ನ ಮೊದಲ ದಿನವೇ ದಕ್ಷಿಣ ಆಫ್ರಿಕಾ ತಂಡವು ಇನಿಂಗ್ಸ್ ಮುನ್ನಡೆ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವು 40.5 ಓವರ್‌ಗಳಲ್ಲಿ 97 ರನ್ ಗಳಿಸಿ ಆಲೌಟ್ ಆಯಿತು. ಅದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಕೊನೆಗೆ 43 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 128 ರನ್ ಗಳಿಸಿತು.

ಲುಂಗಿ ಗಿಡಿಯೊಂದಿಗೆ ಉತ್ತಮ ಬೌಲಿಂಗ್ ಮಾಡಿದ ಎನ್ರಿಚ್ ನೊಕಿಯ ನಾಲ್ಕು ವಿಕೆಟ್‌ಗಳನ್ನು ಗಳಿಸಿ ವಿಂಡೀಸ್‌ ಬಳಗಕ್ಕೆ ಪೆಟ್ಟುಕೊಟ್ಟರು.

ಸಂಕ್ಷಿಪ್ತ ಸುದ್ದಿ: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್: 40.5 ಓವರ್‌ಗಳಲ್ಲಿ 97 (ಕ್ರೇಗ್ ಬ್ರಾಥ್‌ವೇಟ್ 15, ಶಾಯ್ ಹೋಪ್ 15, ಜೇಸನ್ ಹೋಲ್ಡರ್ 20, ಲುಂಗಿ ಗಿಡಿ 19ಕ್ಕೆ5, ಎನ್ರಿಚ್ ನೊಕಿಯ 35ಕ್ಕೆ4) ದಕ್ಷಿಣ ಆಫ್ರಿಕಾ: 43 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 128 (ಏಡನ್ ಮರ್ಕರಂ 60, ರಸ್ಸಿ ವ್ಯಾನ್‌ಡರ್ ಡಸೆ ಬ್ಯಾಟಿಂಗ್ 34, ಜೇಡನ್ ಸೀಲ್ಸ್ 34ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT