ಹೈದರಾಬಾದ್: ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಿಗೆ ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ಸುಳಿವು ನೀಡಿದರು. ತಂಡದ ಗಮನ, ಯುವ ಆಟಗಾರರಿಗೆ ಹೆಚ್ಚು ಅವಕಾಶಗಳನ್ನು ನೀಡುವತ್ತ ಇರಲಿದೆ ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್ಗಳಿಗೆ ಅಲಭ್ಯರಾದಾಗ ಪೂಜಾರ ಅಥವಾ ರಹಾನೆ ಅವರಿಗೆ ಮತ್ತೆ ಅವಕಾಶಗಳನ್ನು ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತೆ ಹಿಂದಡಿ ಇಡುವ ಯೋಚನೆ ಮಾಡಲಿಲ್ಲ. ಕೊಹ್ಲಿ ಬದಲಿಗೆ ಯುವ ಆಟಗಾರ ರಜತ್ ಪಾಟೀದಾರ್ ಅವರನ್ನು ಆಯ್ಕೆ ಮಾಡಲಾಯಿತು.

ಇದರ ಹಿಂದಿನ ತರ್ಕವನ್ನು ರೋಹಿತ್ ವಿವರಿಸಿದರು. ‘ನಾವು ಆ ಬಗ್ಗೆ (ಮತ್ತೆ ಹಳಬರನ್ನು ಕರೆಸುವ ಬಗ್ಗೆ) ಯೋಚಿಸಿದ್ದೆವು. ಆದರೆ ಈಗಿರುವ ಯುವ ಆಟಗಾರರರಿಗೆ ಅವಕಾಶ ಸಿಗುವುದು ಯಾವಾಗ? ಆ ಬಗ್ಗೆ ನಮಗೆ ಯೋಚನೆ ಬಂತು. ನನಗೆ ಕೂಡ’ ಎಂದು ರೋಹಿತ್ ಮೊದಲ ಟೆಸ್ಟ್ಗೆ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ ಹಿರಿಯ ಆಟಗಾರರನ್ನು ಕೈಬಿಡುವ ನಿರ್ಧಾರ ಸುಲಭವಾಗಿರಲಿಲ್ಲ ಎಂದೂ ಹೇಳಿದರು. ರಹಾನೆ ಕಳೆದ ವರ್ಷದ ಮಧ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ಪೂಜಾರ ಅವರನ್ನು ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ನಂತರ ಕೈಬಿಡಲಾಗಿತ್ತು.

‘ಅನುಭವಿ ಆಟಗಾರರನ್ನು ಕೈಬಿಡುವುದು ಅಥವಾ ಪರಿಗಣಿಸದಿರುವುದು ತುಂಬಾ ಕಷ್ಟ. ಅವರು ಗಳಿಸಿರುವ ರನ್ಗಳ ಪ್ರಮಾಣ, ಅವರ ಅನುಭವ, ಅವರು ನಮಗೆ ಗೆಲ್ಲಿಸಿಕೊಟ್ಟಿರುವ ಪಂದ್ಯಗಳನ್ನು ಗಮನಿಸಿದಲ್ಲಿ ಅವರನ್ನು ಕಡೆಗಣಿಸುವುದು ತುಂಬಾ ಕಠಿಣ’ ಎಂದು ತಮ್ಮ ದೀರ್ಘಕಾಲದ ಸಹ ಆಟಗಾರರ ಬಗ್ಗೆ ರೋಹಿತ್ ಅನುಕಂಪದ ಧಾಟಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.