ನವದೆಹಲಿ: ಟ್ವೆಂಟಿ–20 ಮಾದರಿ ಕ್ರಿಕೆಟ್‌ನಲ್ಲಿ ಸತತವಾಗಿ ವೈಡ್ ಎಸೆತಗಳ ಮರುಪರಿಶೀಲನೆ ಮನವಿ ಅರ್ಪಿಸಲು ತಂಡಗಳ ನಾಯಕರಿಗೆ ಅವಕಾಶ ಇರಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪೂಮಾ ಇಂಡಿಯಾ ಇನ್ಸ್ಟಾಗ್ರಾಮ್ ಸಂವಾದದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಜೊತೆಗೆ ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

‘ನಾನು ಒಬ್ಬ ನಾಯಕನಾಗಿ ಹೇಳುತ್ತೇನೆ. ವೈಡ್ ಮತ್ತು ಬ್ಯಾಟ್ಸ್‌ಮನ್‌ಗಳ ಸೊಂಟದೆತ್ತರಕ್ಕೆ ಬರುವ ಫುಲ್‌ಟಾಸ್‌ಗಳ ಮರುಪರಿಶೀಲನೆಗೆ ಮನವಿ ಮಾಡುವ ಅವಕಾಶ ನಾಯಕರಾದವರಿಗೆ ಇರಬೇಕು. ಇದರಿಂದ ತಂಡದ ಫಲಿತಾಂಶದಲ್ಲಿ ಅಗಾಧ ವ್ಯತ್ಯಾಸವಾಗುವುದು ಖಚಿತ’ ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಹೇಳಿಕೆಯನ್ನು ಸಮರ್ಥಿಸಿದ ರಾಹುಲ್, ‘ಇಂತಹದೊಂದು ನಿಯಮ ಬಂದರೆ ಒಳ್ಳೆಯದು. ತಂಡಕ್ಕೆ ಎರಡು ಅವಕಾಶಗಳನ್ನು ಕೊಡಬಹುದು. ಅವುಗಳನ್ನು ಯಾವುದಕ್ಕಾದರೂ ಬಳಸಿಕೊಳ್ಳಬಹುದು’ ಎಂದರು.

‘ಯಾವುದಾದರೂ ಬ್ಯಾಟ್ಸ್‌ಮನ್ 100 ಮೀಟರ್ಸ್‌ಗಿಂತಲೂ ಎತ್ತರದ ಸಿಕ್ಸರ್ ಹೊಡೆದಾಗ ಆತನಿಗೆ ಹೆಚ್ಚು ರನ್‌ಗಳನ್ನು ನೀಡಬೇಕು. ಈ ಬಗ್ಗೆ ಬೌಲರ್‌ಗಳ ಸಲಹೆ ಪಡೆದುಕೊಳ್ಳುತ್ತೇನೆ’ ಎಂದು ರಾಹುಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.