ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದಾಯದ ವಿಶ್ವಕಪ್?

Last Updated 27 ಮೇ 2019, 4:47 IST
ಅಕ್ಷರ ಗಾತ್ರ

2011 ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಮಹೇಂದ್ರಸಿಂಗ್ ಧೋನಿ ಹೊಡೆದ ಆ ಸಿಕ್ಸರ್‌ಗೆ ಭಾರತದ ಮಡಿಲಿಗೆ ವಿಶ್ವಕಪ್ ಬಂದು ಬಿತ್ತು. ಮರುಕ್ಷಣವೇ ಕುಡಿಯೊಡೆದ ಸಂಭ್ರಮದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ’ಯುವ ಆಟಗಾರ’ ವಿರಾಟ್ ಕೊಹ್ಲಿ ಮತ್ತಿತರರು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಮೈದಾನದ ಸುತ್ತು ಹಾಕಿದರು.

ಸಚಿನ್‌ಗೆ ತಾವು ಆಡಿ ಬೆಳೆದ ಅಂಗಳದಲ್ಲಿ ವಿಶ್ವಕಪ್‌ ಕಾಣಿಕೆ ನೀಡಿದ ಇಡೀ ತಂಡ ಸಡಗರಪಟ್ಟಿತ್ತು. ಏಕೆಂದರೆ ಅದಾಗಲೇ 38ರ ಹರೆಯದಲ್ಲಿದ್ದ ಸಚಿನ್‌ ಅವರಿಗೆ ಅದು ಕೊನೆಯ ವಿಶ್ವಕಪ್ ಟೂರ್ನಿಯಾಗಿತ್ತು. ಇದೀಗ ಆ ಸರದಿ ಮಹೇಂದ್ರಸಿಂಗ್ ಧೋನಿ ಅವರದ್ದು. ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ನಲ್ಲಿ ಧೋನಿಗೆ ವಿಶ್ವಕಪ್ ಕಾಣಿಕೆ ನೀಡುವ ಉತ್ಸಾಹದಲ್ಲಿದೆ. 38 ವರ್ಷದ ವಿಕೆಟ್‌ಕೀಪರ್‌–ಬ್ಯಾಟ್ಸ್‌ಮನ್ ಸಂತಸದ ನಗುವಿನೊಂದಿಗೆ ವಿದಾಯ ಹೇಳುವ ನಿರೀಕ್ಷೆ ಮೂಡಿದೆ.

ಆದರೆ ಇಂತಹದ್ದೇ ಪ್ರಯತ್ನ ಈ ಬಾರಿ ಕಣಕ್ಕಿಳಿಯುತ್ತಿರುವ ಇನ್ನೂ ಕೆಲವು ತಂಡಗಳಲ್ಲಿದೆ. ತಮ್ಮ ತಮ್ಮ ತಂಡದಲ್ಲಿರುವ ಹಿರಿಯ, ದಿಗ್ಗಜರಿಗೆ ಕಪ್ ಕಾಣಿಕೆಯೊಂದಿಗೆ ವಿದಾಯ ಹೇಳುವ ಉತ್ಸಾಹದಲ್ಲಿದ್ದಾರೆ. ಯಾವ ತಂಡ ಇದರಲ್ಲಿ ಸಫಲವಾಗುತ್ತದೆಯೋ ಗೊತ್ತಿಲ್ಲ. ಆದರೆ, ಈ 12 ಮಂದಿ ದಿಗ್ಗಜರಿಗೆ ಇದು ಬಹುತೇಕ ಕೊನೆಯ ಏಕದಿನ ಮಾದರಿಯ ವಿಶ್ವಕಪ್ ಟೂರ್ನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT