ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಪಿಎಲ್ ಅದ್ಭುತ ಅನುಭವ ನೀಡಿದೆ: ಎಲಿಸ್ ಪೆರಿ

Published 14 ಮಾರ್ಚ್ 2024, 0:18 IST
Last Updated 14 ಮಾರ್ಚ್ 2024, 0:18 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಎರಡನೇ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುತ್ತಿದ್ದೇನೆ. 20 ರಿಂದ 30 ಸಾವಿರ ಪ್ರೇಕ್ಷಕರ ಮುಂದೆ ಆಡುವುದು ಅದ್ಭುತ ಅನುಭವ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲಿಸ್ ಪೆರಿ ಹೇಳಿದರು.

ಬುಧವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಮೃತಿ ಮಂದಾನ ಉತ್ತಮ ನಾಯಕಿ. ಅವರು ಸ್ವಲ್ಪ ಅಂತರ್ಮುಖಿಯಾದರೂ ಸ್ನೇಹಜೀವಿ. ಎಲ್ಲರೊಂದಿಗೆ ಬಾಂಧವ್ಯಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ತಂಡದ ಇನ್ನೊಬ್ಬ ಆಟಗಾರ್ತಿ ರಿಚಾ ಹಸನ್ಮುಖಿ. ವಿಕೆಟ್‌ಕೀಪಿಂಗ್‌ನಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿದ್ದಾರೆ’ ಎಂದರು.

ಮಂಗಳವಾರ ನಡೆದ ಪಂದ್ಯದಲ್ಲಿ ಅವರು ಆರು ವಿಕೆಟ್ ಗಳಿಸಿ, 40 ರನ್‌ ಕೂಡ ಹೊಡೆದು ತಂಡವನ್ನು ಗೆಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT