ಫುಟ್‌ಬಾಲ್ ತಂಡದ ಕೋಚ್‌ ಹುದ್ದೆಗೆ 250 ಅರ್ಜಿ

ಬುಧವಾರ, ಏಪ್ರಿಲ್ 24, 2019
34 °C

ಫುಟ್‌ಬಾಲ್ ತಂಡದ ಕೋಚ್‌ ಹುದ್ದೆಗೆ 250 ಅರ್ಜಿ

Published:
Updated:

ನವದೆಹಲಿ: ಇತ್ತೀಚೆಗೆ ಉತ್ತಮ ಸಾಮರ್ಥ್ಯ ತೋರುತ್ತಿರುವ ಭಾರತ ಫುಟ್‌ಬಾಲ್ ತಂಡದ ಕೋಚ್ ಆಗಲು ಆಕಾಂಕ್ಷಿಗಳು ಮುಗಿ ಬಿದ್ದಿದ್ದಾರೆ. ಎಎಫ್‌ಸಿ ಕಪ್‌ ಟೂರ್ನಿಯಲ್ಲಿ ತಂಡ ನಾಕೌಟ್ ಹಂತ ಪ್ರವೇಶಿಸಲು ವಿಫಲವಾದ ಕಾರಣ ಕೋಚ್ ಸ್ಟೀಫನ್ ಕಾನ್‌ಸ್ಟಂಟೇನ್‌ ರಾಜೀನಾಮೆ ಸಲ್ಲಿಸಿದ್ದರು.

ಹೀಗಾಗಿ ಹೊಸ ಕೋಚ್ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿತ್ತು. 250ಕ್ಕೂ ಹೆಚ್ಚು ಮಂದಿ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಅವರಲ್ಲಿ ಯುರೋಪ್‌ನ ಕೆಲವು ಪ್ರಸಿದ್ಧ ಆಟಗಾರರೂ ಇದ್ದಾರೆ.

ಭಾರಿ ಹೆಸರು ಮಾಡಿರುವವರು ಅರ್ಜಿ ಸಲ್ಲಿಸಿದ್ದರೂ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ಅವರ ಪೈಕಿ ಯಾರ ಹೆಸರನ್ನೂ ಪರಿಗಣಿಸಲು ನಿರ್ಧರಿಸಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ. ಆಯ್ಕೆ ಸಮಿತಿಯು ಮುಂದಿನ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಿ ಕಾರ್ಯಕಾರಿ ಸಮಿತಿಗೆ ಕಳುಹಿಸಿಕೊಡಲಿದೆ. ನಂತರ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !