ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಬ್ಲಿಟ್ಜ್‌ ತಂಡಕ್ಕೆ ಜಯ

Last Updated 8 ಫೆಬ್ರುವರಿ 2019, 16:31 IST
ಅಕ್ಷರ ಗಾತ್ರ

ಬೆಂಗಳೂರು: ದಾವೂದ್‌ ಅಹ್ಮದ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬ್ಲಿಟ್ಜ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಬಿ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಹೋರಾಟದಲ್ಲಿ ಬ್ಲಿಟ್ಜ್‌ ಎಫ್‌ಸಿ 3–2 ಗೋಲುಗಳಿಂದ ತಿಲಕ್‌ ಮೆಮೋರಿಯಲ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಬ್ಲಿಟ್ಜ್‌ ತಂಡದ ಅಹ್ಮದ್‌ 19ನೇ ನಿಮಿಷದಲ್ಲಿ ಗೋಲು ಹೊಡೆದರು. 48ನೇ ನಿಮಿಷದಲ್ಲಿ ತಿಲಕ್‌ ತಂಡದ ಅಶೋಕ್‌ ಗೋಲು ಬಾರಿಸಿ 1–1 ಸಮಬಲಕ್ಕೆ ಕಾರಣರಾದರು. 64ನೇ ನಿಮಿಷದಲ್ಲಿ ಈ ತಂಡದ ಯೋಹಿತ್‌ ಕಾಲ್ಚಳಕ ತೋರಿ 2–1 ಮುನ್ನಡೆಗೆ ಕಾರಣರಾದರು. ಎದುರಾಳಿ ಪಾಳಯದಲ್ಲಿ ಈ ಖುಷಿ ಹೆಚ್ಚು ಕಾಲ ಉಳಿಯಲು ಅಹ್ಮದ್‌ ಅವಕಾಶ ನೀಡಲಿಲ್ಲ. ಅವರು 65ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದ್ದರಿಂದ 2–2 ಸಮಬಲ ಕಂಡುಬಂತು. 69ನೇ ನಿಮಿಷದಲ್ಲಿ ಅಗಸ್ಟೀನ್‌ ಗೋಲು ಬಾರಿಸಿ ಬ್ಲಿಟ್ಜ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

‘ಬಿ’ ಗುಂಪಿನ ಪಂದ್ಯದಲ್ಲಿ ಸನ್‌ ರೈಸ್‌ ಎಫ್‌ಸಿ 2–0 ಗೋಲುಗಳಿಂದ ರಾಯಲ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.

ಸನ್‌ ರೈಸ್‌ ತಂಡದ ಆಯುಷ್‌ ಮತ್ತು ಎಸ್‌.ಜಾನ್ಸನ್‌ ಅವರು ಕ್ರಮವಾಗಿ ಏಳು ಮತ್ತು 70+1ನೇ ನಿಮಿಷಗಳಲ್ಲಿ ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT