ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಎಂಇಜಿಗೆ ರೋಚಕ ಗೆಲುವು

Last Updated 17 ಡಿಸೆಂಬರ್ 2018, 20:32 IST
ಅಕ್ಷರ ಗಾತ್ರ

ಬೆಂಗಳೂರು: ಎಂಇಜಿ ಆ್ಯಂಡ್ ಸೆಂಟರ್ ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ರೋಚಕ ಗೆಲುವು ಸಾಧಿಸಿದರು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ಜವಾಹರ್‌ ಯೂನಿಯನ್ ಎಫ್‌ಸಿಯನ್ನು 2–1ರಿಂದ ಮಣಿಸಿತು.

56ನೇ ನಿಮಿಷದಲ್ಲಿ ಆಶಿಶ್‌ ಗಳಿಸಿದ ಗೋಲಿನ ಮೂಲಕ ಜವಾಹರ್ ಮುನ್ನಡೆ ಸಾಧಿಸಿತ್ತು.

ಆದರೆ 88ನೇ ನಿಮಿಷದಲ್ಲಿ ಅವರು ಎದುರಾಳಿ ತಂಡಕ್ಕೆ ಗೋಲಿನ ಉಡುಗೊರೆ ನೀಡಿದರು. 90ನೇ ನಿಮಿಷದಲ್ಲಿ ಲೆತೂಲೆನ್‌ ಗಳಿಸಿದ ಗೋಲಿನ ಮೂಲಕ ಎಂಇಜಿ ಜಯದ ಸಂಭ್ರಮದಲ್ಲಿ ಮಿಂದೆದ್ದಿತು.

ಬೆಂಗಳೂರು ಎಫ್‌ಸಿ (ಬಿ) ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್‌ ನಡುವಿನ ಪಂದ್ಯ 1–1ರಿಂದ ಡ್ರಾ ಆಯಿತು. ಮೈರಾನ್‌ ಮೆಂಡಿಸ್‌ (26ನೇ ನಿ) ಮತ್ತು ಹಂಸ (35ನೇ ನಿ) ಕ್ರಮವಾಗಿ ಬಿಎಫ್‌ಸಿ ಮತ್ತು ಯುನೈಟೆಡ್‌ ಪರ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT