ಶನಿವಾರ, ಏಪ್ರಿಲ್ 1, 2023
23 °C
ಸ್ಯಾಫ್ ಚಾಂಪಿಯನ್‌ಷಿಪ್‌ ಪೂರ್ವಸಿದ್ಧತೆಗೆ ಸ್ನೇಹಪರ ಪಂದ್ಯ: ನೇಪಾಳ ಎದುರಾಳಿ

ಫುಟ್‌ಬಾಲ್‌: ಜಯದ ವಿಶ್ವಾಸದಲ್ಲಿ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ಮೊದಲ ಪಂದ್ಯದಲ್ಲಿ ತನಗಿಂತ ಕೆಳ ರ‍್ಯಾಂಕಿನ ನೇಪಾಳ ಎದುರು ಡ್ರಾ ಸಾಧಿಸಿದ್ದ ಭಾರತ ಫುಟ್‌ಬಾಲ್‌ ತಂಡವು ಭಾನುವಾರ ಎರಡನೇ ಸ್ನೇಹಪರ ಪಂದ್ಯದಲ್ಲಿ ಜಯದ ವಿಶ್ವಾಸದಲ್ಲಿದೆ.

ಮಾಲ್ಡಿವ್ಸ್‌ನಲ್ಲಿ ಅಕ್ಟೋಬರ್‌ 3ರಿಂದ 13ರವರೆಗೆ ನಿಗದಿಯಾಗಿರುವ ಸ್ಯಾಫ್ ಚಾಂಪಿಯನ್‌ಷಿಪ್‌ನ ಪೂರ್ವಸಿದ್ಧತೆಯಾಗಿ ಸುನಿಲ್ ಚೆಟ್ರಿ ನಾಯಕತ್ವದ ಭಾರತ, ಹಿಮಾಲಯದ ತಂಡದ ಎದುರು ಈ ಪಂದ್ಯ ಆಡುತ್ತಿದೆ. ಇದೇ ವೇಳೆ ಆತಿಥೇಯ ನೇಪಾಳ ಒದಗಿಸಿರುವ ತರಬೇತಿ ಸೌಲಭ್ಯಗಳ ಕುರಿತು ಭಾರತ ಫುಟ್‌ಬಾಲ್ ತಂಡವು ಅಸಮಾಧಾನ ವ್ಯಕ್ತಪಡಿಸಿದೆ.

ಫಿಫಾ ರ‍್ಯಾಂಕಿಂಗ್‌ನಲ್ಲಿ 171ನೇ ಸ್ಥಾನದಲ್ಲಿರುವ ನೇಪಾಳ 105ನೇ ರ‍್ಯಾಂಕಿನ ಭಾರತದ ಜೊತೆಗೆ ಗುರುವಾರ ನಡೆದ ಮೊದಲ ಪಂದ್ಯದಲ್ಲಿ 1–1ರ ಸಮಬಲ ಸಾಧಿಸಿತ್ತು.

ಕಳೆದ ಪಂದ್ಯದಲ್ಲಿ ಭಾರತ ತೋರಿರುವ ಸಾಮರ್ಥ್ಯದ ಕುರಿತು ಮುಖ್ಯ ಕೋಚ್‌ ಇಗರ್ ಸ್ಟಿಮ್ಯಾಚ್‌ ಸಂತುಷ್ಟರಾಗಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಆಟಗಾರರು ಉತ್ತಮವಾಗಿ ಆಡಲಿದ್ದಾರೆ ಎಂದು ವಿಶ್ವಾಸ ಅವರಿಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು