ಜೆಎಫ್‌ಸಿಯ ‘ಗೋಡೆ’ ಕೆಡಹುವುದೇ ಬಿಎಫ್‌ಸಿ?

7
ಸ್ಪೇನ್‌ ದೇಶದ ಕೋಚ್‌ಗಳಾದ ಕಾರ್ಲಸ್ ಕ್ವದ್ರತ್‌, ಸೀಸರ್ ಫೆರಾಂಡೊ ಅವರಿಗೆ ಪ್ರತಿಷ್ಠೆಯ ಕಣ

ಜೆಎಫ್‌ಸಿಯ ‘ಗೋಡೆ’ ಕೆಡಹುವುದೇ ಬಿಎಫ್‌ಸಿ?

Published:
Updated:
Deccan Herald

ಬೆಂಗಳೂರು: ಕಳೆದ ವಾರ, ‘ದಕ್ಷಿಣ ಡರ್ಬಿ’ಯಲ್ಲಿ ಬದ್ಧ ಎದುರಾಳಿಯನ್ನು ಮಣಿಸಿ ಭರವಸೆಯಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್‌ನ (ಐಎಸ್ಎಲ್‌) ಎರಡನೇ ಹಣಾಹಣಿಗೆ ಸಜ್ಜಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗದ ಎದುರಾಳಿ ಜೆಮ್‌ಶೆಡ್‌ಪುರ ಎಫ್‌ಸಿ.

ಎರಡೂ ತಂಡಗಳು ಐದನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿವೆ. ಬಿಎಫ್‌ಸಿ ಏಕಪಕ್ಷೀಯವಾದ ಒಂದು ಗೋಲಿನಿಂದ ಚೆನ್ನೈಯಿನ್ ಎಫ್‌ಸಿಯನ್ನು ಮಣಿಸಿದ್ದರೆ, ಜೆಎಫ್‌ಸಿ 2–0ಯಿಂದ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತ್ತು. ಹೀಗಾಗಿ ಜಯದ ಲಯ ಕಾಯ್ದುಕೊಂಡು ಮುಂದೆ ಸಾಗಲು ಭಾನುವಾರ ಉಭಯ ತಂಡಗಳೂ ಪ್ರಯತ್ನಿಸಲಿವೆ.

ಗೋಲ್‌ಕೀಪರ್ ಸುಬ್ರತಾ ಪಾಲ್‌ ಅವರು ಬಿಎಫ್‌ಸಿ ಎದುರು ಕಣಕ್ಕೆ ಇಳಿಯುವುದಿಲ್ಲ ಎಂದು ಜೆಎಫ್‌ಸಿ ಕೋಚ್‌ ಸೀಸರ್ ಫೆರಾಂಡೊ ತಿಳಿಸಿದ್ದಾರೆ. ಇದು ತಂಡದ ಮೇಲೆ ಯಾವುದೇ ದುಷ್ಪರಿಣಾಮ ಬೀರಲಾರದು. ಯಾಕೆಂದರೆ ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ ಸುಭಾಷಿಷ್‌ ರಾಯ್‌ ಅವರ ‘ಕವಚ’ದ ಬಲ ತಂಡಕ್ಕಿದೆ.

ಬಿಎಫ್‌ಸಿಯ ಸುನಿಲ್ ಚೆಟ್ರಿ, ಮಿಕು ಮತ್ತು ಶೆಂಬೊಯ್ ಹಾಕಿಪ್ ಯಾವುದೇ ತಂಡದ ವಿರುದ್ಧ ಗೋಲು ಗಳಿಸಲು ಸಮರ್ಥರಾಗಿದ್ದಾರೆ. ಜೆಎಫ್‌ಸಿಯ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಆದ್ದರಿಂದ ಭಾನುವಾರ ಬಿಎಫ್‌ಸಿಯ ಸ್ಟ್ರೈಕರ್‌ಗಳು ಮತ್ತು ಜೆಫ್‌ಸಿಯ ರಕ್ಷಣಾ ವಿಭಾಗದ ನಡುವಿನ ಕದನವು ರೋಮಾಂಚನಗೊಳಿಸುವ ನಿರೀಕ್ಷೆಯಲ್ಲಿದ್ದಾರೆ ಫುಟ್‌ಬಾಲ್ ಪ್ರಿಯರು.

ಅನನುಭವಿ ಫಾರ್ಡರ್ಡ್ ವಿಭಾಗ: ಜೆಎಫ್‌ಸಿಯ ಫಾರ್ವರ್ಡ್ ಆಟಗಾರರು ಟೂರ್ನಿಯಲ್ಲಿ ಇನ್ನೂ ಖಾತೆ ತೆರೆಯಲಿಲ್ಲ. ಮೊದಲ ‍ಪಂದ್ಯದಲ್ಲಿ ಮಿಡ್‌ಫೀಲ್ಡರ್‌ಗಳಾದ ಮರಿಯೊ ಆರ್ಕಿಸ್ ಮತ್ತು ಪ್ಯಾಬ್ಲೊ ಮೊರ್ಗಾಡೊ ಗೋಲು ಗಳಿಸಿದ್ದರು. ಫಾರ್ವರ್ಡ್ ವಿಭಾಗದ ಆಟಗಾರರಿಗೆ ಅನುಭವದ ಕೊರತೆಯೂ ಇದೆ. 17 ಪಂದ್ಯಗಳನ್ನು ಆಡಿರುವ ಫಾರೂಕ್ ಚೌಧರಿ ಅವರನ್ನು ಹೊರತುಪಡಿಸಿದರೆ ಸರ್ಜಿಯೊ ಸಿಡಾಂಚ ಮತ್ತು ಸುಮೀತ್ ಪಸ್ಸಿ ಒಂದೊಂದು ಪಂದ್ಯ ಮಾತ್ರ ಆಡಿದ್ದಾರೆ. ಗೌರವ್ ಮುಖಿ ಮತ್ತು ಟಿಮ್ ಖಾಹಿಲ್‌ ಇನ್ನೂ ಐಎಸ್‌ಎಲ್‌ಗೆ ಪದಾರ್ಪಣೆ ಮಾಡಲಿಲ್ಲ.

ಸ್ಪೇನ್‌ ಕೋಚ್‌ಗಳ ಪ್ರತಿಷ್ಠೆ: ಬಿಎಫ್‌ಸಿ ಮತ್ತು ಜೆಎಫ್‌ಸಿಯ ಕೋಚ್‌ಗಳಿಬ್ಬರೂ ಸ್ಪೇನ್‌ನವರು. ಜೆಮ್‌ಶೆಡ್‌ಪುರ ತಂಡದ ವಿದೇಶಿ ಆಟಗಾರರ ಪೈಕ್‌ ಸ್ಪೇನ್‌ನವರೇ ಹೆಚ್ಚು ಇದ್ದಾರೆ. ಕೆಲವೇ ತಿಂಗಳ ಹಿಂದೆ ಬಿಎಫ್‌ಸಿಯ ಮುಖ್ಯ ಕೋಚ್ ಆಗಿ ನೇಮಕೊಂಡಿರುವ ಕಾರ್ಲಸ್ ಕ್ವದ್ರತ್‌ ‘ಸ್ಪೇನ್‌ ಎದುರಾಳಿ’ಗಳ ವಿರುದ್ಧ ಯಾವ ರಣತಂತ್ರಗಳನ್ನು ಬಳಸುವರು ಎಂಬುದು ಕುತೂಹಲ ಕೆರಳಿಸಿದೆ.

ಮೀನಖಂಡದ ನೋವಿನಿಂದ ಬಳಲುತ್ತಿರುವ ಡಿಫೆಂಡರ್‌ ಧನಚಂದ್ರ ಸಿಂಗ್ ಅವರಿಗೆ ವಿಶ್ರಾಂತಿ ನೀಡಲು ಜೆಎಫ್‌ಸಿ ನಿರ್ಧರಿಸಿದೆ. ಆದ್ದರಿಂದ ಸ್ಪೇನ್‌ನ ತಿರಿ ಅವಕಾಶ ಗಳಿಸುವುಚು ನಿಶ್ಚಿತ. ಆಸ್ಟ್ರೇಲಿಯಾದ ಟಿಮ್ ಖಾಹಿಲ್‌ ಅವರು ಚೊಚ್ಚಲ ಪಂದ್ಯ ಆಡುವರೇ ಎಂಬುದು ಪಂದ್ಯದ ಮತ್ತೊಂದು ಕುತೂಹಲ.

ಕಳೆದ ಬಾರಿ ಲೀಗ್ ಹಂತದಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಆರನ್ನು ಗೆದ್ದಿದ್ದ ಬಿಎಫ್‌ಸಿ ತವರಿನಲ್ಲಿ ಜೆಎಫ್‌ಸಿ ವಿರುದ್ಧ ಸೋತಿತ್ತು. ಆ ಸೋಲಿಗೆ ಭಾನುವಾರ ಸೇಡು ತೀರಿಸಿಕೊಳ್ಳಲು ಶ್ರಮಿಸಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !