ಸೋಮವಾರ, ಏಪ್ರಿಲ್ 12, 2021
32 °C
ಬಿಡಿಎಫ್‌ಎ ಬಿ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌

ಸಂತೋಷ್ ನಾಲ್ಕು ಗೋಲು: ಡಿವೈಇಎಸ್‌ ಎಫ್‌ಸಿ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂತೋಷ್ ತಮಾಟ ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಡಿವೈಇಎಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ಬಿ ಡಿವಿಷನ್‌ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಇಲ್ಲಿಯ ಬಿಎಫ್‌ಎಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಿ ಗುಂಪಿನ ಹಣಾಹಣಿಯಲ್ಲಿ 5–0 ಗೋಲುಗಳಿಂದ ಸನ್‌ರೈಸ್‌ ಎಫ್‌ಸಿ ತಂಡವನ್ನು ಮಣಿಸಿತು.

ಲೆನಾಲ್ಡ್‌ ಕಾರ್ಲ್ ಮಾರ್ಕ್‌ (9ನೇ ನಿಮಿಷ) ವಿಜೇತ ತಂಡದ ಮೊದಲ ಗೋಲು ಹೊಡೆದರು. ಸಂತೋಷ್‌ 26, 35+2, 49 ಹಾಗೂ 70ನೇ ನಿಮಿಷಗಳಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಎಚ್ಎಎಲ್ ಎಫ್‌ಸಿ 8–0ಯಿಂದ ಬೆಂಗಳೂರು ಮಾರ್ಸ್‌ ತಂಡವನ್ನು ಪರಾಭವಗೊಳಿಸಿತು. ಎಚ್‌ಎಎಲ್‌ ತಂಡದ ರವಿತೇಜ ವೈ.ಆರ್‌. (47 ಹಾಗೂ 63ನೇ ನಿ.) ಎರಡು ಬಾರಿ ಕಾಲ್ಚಳಕ ತೋರಿದರು. ಮಲಿಕ್ ಲಾಜಿಂ (6ನೇ ನಿ.), ಸ್ವಮ್ಯ ಹಾರ್ದಿಕ ಸಿಂಗ್‌ (13ನೇ ನಿ.), ರೋಮನ್ ಸುಬ್ಬ (27ನೇ ನಿ.), ಶ್ಯಾಮ್ ಜೋಸ್ (35ನೇ ನಿ.), ಶಕತ್ ದಾಸ್‌ (45ನೇ ನಿ.) ಹಾಗೂ ಅಂಕಿತ್ ಕುಮಾರ್‌ (70+3ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.

ಎ ಗುಂಪಿನ ಪಂದ್ಯದಲ್ಲಿ ಮಹಮ್ಮಡನ್ ಸ್ಪೋರ್ಟಿಂಗ್ ಎಫ್‌ಸಿ 2–1ರಿಂದ ಆರ್‌.ಎಸ್‌. ಸ್ಪೋರ್ಟ್ಸ್ ತಂಡದ ವಿರುದ್ಧ ಗೆದ್ದಿತು.

ಶನಿವಾರ ಮತ್ತು ಭಾನುವಾರ ವಿಶ್ರಾಂತಿ ದಿನಗಳಾಗಿದ್ದು ಯಾವುದೇ ಪಂದ್ಯಗಳು ನಡೆಯುವುದಿಲ್ಲ. ಸೋಮವಾರ ಎ ಡಿವಿಷನ್ ಪಂದ್ಯಗಳು ಆರಂಭವಾಗಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.