ಫುಟ್‌ಬಾಲ್‌: ಗೋವಾಗೆ ಜಯ

7

ಫುಟ್‌ಬಾಲ್‌: ಗೋವಾಗೆ ಜಯ

Published:
Updated:

ನವದೆಹಲಿ: ಗೋವಾ ಫುಟ್‌ಬಾಲ್‌ ಕ್ಲಬ್‌ ತಂಡವು ಕಾರ್ಟಾಗೆನಾ ಫುಟ್‌ಬಾಲ್‌ ಕ್ಲಬ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಜಯ ಸಾಧಿಸಿದೆ. 

ಗುರುವಾರ ರಾತ್ರಿ ಸ್ಪೇನ್‌ನ ಮರ್ಸಿಯಾದಲ್ಲಿ ನಡೆದ ಈ ಪಂದ್ಯದಲ್ಲಿ ಗೋವಾ ತಂಡವು 3–2 ಗೋಲುಗಳಿಂದ ಸ್ಥಳೀಯ ಕಾರ್ಟಾಗೆನಾ ತಂಡವನ್ನು ಮಣಿಸಿತು. 

ಪಂದ್ಯದ ಆರಂಭದಿಂದಲೂ ಗೋವಾ ತಂಡವು ಬಿರುಸಿನ ಆಟವಾಡಿತು. 18ನೇ ನಿಮಿಷದಲ್ಲಿ ಜಾಕಿಚಂದ್‌ ಸಿಂಗ್‌ ಅವರು ಮೊದಲ ಗೋಲು ಗಳಿಸಿ 1-0ಯಿಂದ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ನಂತರವೂ ತಂಡ ಗೋಲು ಗಳಿಸಲು ಅನೇಕ ಯತ್ನಗಳನ್ನು ಮಾಡಿತು. ಆದರೆ, ಎದುರಾಳಿ ತಂಡದ ರಕ್ಷಣಾ ಕೋಟೆ ಭೇಧಿಸಲು ಆ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ. 

42ನೇ ನಿಮಿಷದಲ್ಲಿ ಕೊರೊ ಅವರು ಅಮೋಘ ಗೋಲು ದಾಖಲಿಸಿದರು. ತಂಡದ ಮುನ್ನಡೆ 2–0ಗೆ ಹೆಚ್ಚಿತು. 55ನೇ ನಿಮಿಷದಲ್ಲಿ ಕೊರೊ ಮತ್ತೆ ಚೆಂಡನ್ನು ಗುರಿ ತಲುಪಿಸಿ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. 

ಒತ್ತಡಕ್ಕೆ ಸಿಲುಕಿದ ಕಾರ್ಟಾಗೆನಾ ತಂಡವು ಗೋಲು ಗಳಿಸಲು ಹಲವು ಬಾರಿ ಪ್ರಯತ್ನ ನಡೆಸಿತು. ಆದರೆ, ಗೋವಾ ತಂಡದ ರಕ್ಷಣಾ ಪಡೆಯ ಎಚ್ಚರಿಕೆ ಆಟದಿಂದಾಗಿ ಚೆಂಡನ್ನು ಗುರಿ ಸೇರಿಸಲು ಸಾಧ್ಯವಾಗಲಿಲ್ಲ. 

71ನೇ ನಿಮಿಷದಲ್ಲಿ ಕಾರ್ಟಾಗೆನಾ ತಂಡವು ಖಾತೆ ತೆರೆಯಿತು. 81ನೇ ನಿಮಿಷದಲ್ಲಿ ಈ ತಂಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಅದನ್ನು ಸದುಪಯೋಗಪಡಿಸಿಕೊಂಡ ತಂಡ ಹಿನ್ನಡೆ ತಗ್ಗಿಸಿಕೊಂಡಿತು. ಆದರೆ, ಮುಂದಿನ ಅವಧಿಯಲ್ಲಿ ಗೋವಾ ತಂಡದ ಆಟಗಾರರು ಎಚ್ಚರಿಕೆಯ ಆಟವಾಡಿದರು. ಹೀಗಾಗಿ, ಸಮಬಲ ಸಾಧಿಸಲು ಕಾರ್ಟಾಗೆನಾಗೆ ಸಾಧ್ಯವಾಗಲಿಲ್ಲ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !