ಭಾನುವಾರ, ಸೆಪ್ಟೆಂಬರ್ 19, 2021
24 °C

ಎಫ್‌ಸಿ ಗೋವಾ ಸೇರಿದ ಐರಮ್ ಕ್ಯಾಬ್ರೆರಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಎಫ್‌ಸಿ ಗೋವಾ ತಂಡ ಸ್ಪೇನ್‌ನ ಫಾರ್ವರ್ಡ್ ಆಟಗಾರ ಐರಮ್ ಕ್ಯಾಬ್ರೆರಾ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 33 ವರ್ಷದ ಕ್ಯಾಬ್ರೆರಾ ಒಂದು ವರ್ಷ ತಂಡದೊಂದಿಗೆ ಇರುವರು.

ಯುರೋಪ್‌ನ ಕೆಲವು ಪ್ರಮುಖ ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ಕ್ಯಾಬ್ರೆರಾ ಪೋಲೆಂಡ್‌ನ ಎಕ್ಸ್‌ಟ್ರಾಕ್ಲಸಾ ಮತ್ತು ಸೈಪ್ರಸ್‌ನ ಪ್ರೊಟಾತ್ಲಿಮ ಸಿಟಾ ಲೀಗ್‌ಗಳಲ್ಲಿ ಅಮೋಘ ಆಟವಾಡಿ ಗಮನ ಸೆಳೆದಿದ್ದರು. ಸ್ಪೇನ್‌ನಲ್ಲಿ ವಿಲಾರಿಯಲ್ ‘ಬಿ’, ಕಾರ್ಡೊಬಾ, ನ್ಯುಮಾನ್ಸಿಯ, ಲೂಗೊ, ಕಾಡಿಜ್‌ ಮತ್ತು ಎಕ್ಸ್‌ಟ್ರಿಮಾಡುರ ಕ್ಲಬ್‌ಗಳಲ್ಲಿ ಆಡಿದ್ದಾರೆ.

ಎಕ್ಸ್‌ಟ್ರಾಕ್ಲಸಾ ಲೀಗ್‌ನಲ್ಲಿ ವಿಸ್ಲಾ ಪ್ಲಾಕ್‌, ಕ್ರಸೋವಿಯಾ ಮತ್ತು ಕೋರೊನ ಕೀಲ್ಸ್‌ ಕ್ಲಬ್‌ಗಳ ಪರವಾಗಿ ಕಣಕ್ಕೆ ಇಳಿದಿದ್ದ ಅವರು ಒಟ್ಟು 60 ಪಂದ್ಯಗಳಲ್ಲಿ 30 ಗೋಲುಗಳನ್ನು ಗಳಿಸಿದ್ದಾರೆ. ನಾಲ್ಕು ಅಸಿಸ್ಟ್‌ಗಳ ಮೂಲಕ ಗೋಲು ಗಳಿಸಲು ನೆರವಾಗಿದ್ದಾರೆ. 

‘ನನ್ನ ಮೇಲೆ ನಂಬಿಕೆ ಇರಿಸಿ ಕ್ಲಬ್‌ಗೆ ಕರೆಸಿಕೊಂಡದ್ದಕ್ಕೆ ಕೃತಜ್ಞನಾಗಿದ್ದೇನೆ. ಇದು ನನ್ನ ವೃತ್ತಿಬದುಕಿನಲ್ಲಿ ಮತ್ತೊಂದು ಸೊಗಸಾದ ಅಧ್ಯಾಯವಾಗುವ ಭರವಸೆ ಇದೆ. ಭಾರತದಲ್ಲಿ ಆಡಲು ಮತ್ತು ಸುಂದರ ರಾಜ್ಯವಾದ ಗೋವಾದ ಅನುಭವ ಪಡೆಯಲು ಕಾತರನಾಗಿದ್ದೇನೆ’ ಎಂದು ಐರಮ್ ಕ್ಯಾಬ್ರೆರಾ ಅಭಿಪ್ರಾಯಪಟ್ಟಿದ್ದಾರೆ.

‘ಯುರೋಪ್‌ನಲ್ಲಿ ಗಳಿಸಿದ ಅನುಭವವನ್ನು ಇಲ್ಲಿ ಧಾರೆ ಎರೆದು ಗೋಲುಗಳನ್ನು ಗಳಿಸಿ ತಂಡದ ಗೆಲುವಿವಾಗಿ ಪ್ರಯತ್ನಿಸುವೆ. ತಂಡದ ಶ್ರೇಯಸ್ಸೇ ಇನ್ನು ನನ್ನ ಧ್ಯೇಯ’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು