ಡೈನಾಮೊಸ್‌ಗೆ ಮೊದಲ ಜಯ

7

ಡೈನಾಮೊಸ್‌ಗೆ ಮೊದಲ ಜಯ

Published:
Updated:

ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ತಂಡವನ್ನು ಮಣಿಸಿ ಡೆಲ್ಲಿ ಡೈನಾಮೊಸ್ ತಂಡ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಮೊದಲ ಜಯ ಗಳಿಸಿತು. ಇಲ್ಲಿನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಡೈನಾಮೊಸ್‌ 3–1ರಿಂದ ಗೆದ್ದಿತು.

ಡ್ಯಾನಿಯಲ್‌ ಲಾಲ್ಹುಂಪಿಯಾ (16ನೇ ನಿಮಿಷ), ವಿಕ್ರಂಜೀತ್‌ ಸಿಂಗ್ (78ನೇ ನಿ) ಹಾಗೂ ನಂದಕುಮಾರ್ ಶೇಖರ್ (82ನೇ ನಿ) ಡೈನಾಮೊಸ್‌ ಪರ ಗೋಲು ಗಳಿಸಿದರು. ರಾಫೆಲ್ ಆಗಸ್ಟೊ (39ನೇ ನಿ) ಆತಿಥೇಯರಿಗಾಗಿ ಏಕೈಕ ಗೋಲು ಗಳಿಸಿದರು. ಈ ಸೋಲಿನೊಂದಿಗೆ ಚಾಂಪಿಯನ್ನರು ಪಾಯಿಂಟ್‌ ಪಟ್ಟಿಯ ಕೊನೆಯ ಸ್ಥಾನಕ್ಕೆ ಕುಸಿಯಿತು.

12 ಪಂದ್ಯಗಳಲ್ಲಿ ಒಂದು ಜಯ, ನಾಲ್ಕು ಡ್ರಾ ಮತ್ತು ಏಳು ಸೋಲಿನೊಂದಿಗೆ ಡೈನಾಮೊಸ್‌ ಒಂಬತ್ತನೇ ಸ್ಥಾನ ಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !