ಫುಟ್‌ಬಾಲ್: ಬೆಂಗಳೂರು ಡ್ರೀಮ್ ಯುನೈಟೆಡ್‌ಗೆ ಜಯ

ಬೆಂಗಳೂರು: ಶರೂನ್ ಎನ್.ಎಸ್. ಹಾಗೂ ನಿಮಾ ಲೆಪ್ಚಾ ಗಳಿಸಿದ ಗೋಲುಗಳ ನೆರವಿನಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯ ಗಳಿಸಿತು.
ಬಿಎಫ್ಎಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೋಮವಾರ 2–1ರಿಂದ ಯಂಗ್ ಚಾಲೆಂಜರ್ಸ್ ಎಫ್‌ಸಿ ತಂಡವನ್ನು ಸೋಲಿಸಿತು. ಶರೂನ್ 35ನೇ ನಿಮಿಷ ಹಾಗೂ ಹಾಗೂ ನಿಮಾ 90ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಯಂಗ್ ಚಾಲೆಂಜರ್ಸ್ ಪರ ಮುರಳಿ ಜೋಸೆಫ್ (88ನೇ ನಿಮಿಷ) ಗೋಲು ದಾಖಲಿಸಿದರು.
ಇನ್ನೊಂದು ಪಂದ್ಯದಲ್ಲಿ ಎಫ್‌ಸಿ ಡೆಕ್ಕನ್ ತಂಡವು 1–1ರಿಂದ ಕೊಡಗು ಎಫ್‌ಸಿಯೊಡನೆ ಡ್ರಾ ಸಾಧಿಸಿತು. ಡೆಕ್ಕನ್ ತಂಡದ ಮುಹಮ್ಮದ್ ಅಜ್ಮಲ್ ಕೆ.ಟಿ. (35ನೇ ನಿಮಿಷ) ಹಾಗೂ ಕೊಡಗು ತಂಡದ ಪರ ಶರತ್ ರಾಜ್‌ಕುಮಾರ್ (21ನೇ ನಿ.) ಗೋಲು ಹೊಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.