ಶುಕ್ರವಾರ, ನವೆಂಬರ್ 22, 2019
20 °C

ಬಿಡಿಎಫ್‌ಎ ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್‌ ಭರ್ಜರಿ ಆರಂಭ

Published:
Updated:
Prajavani

ಬೆಂಗಳೂರು: ಅಮೋಘ ಜಯ ಸಾಧಿಸಿದ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಫ್‌ಸಿಬಿಯು 4–1ರಲ್ಲಿ ಎಎಸ್‌ಸಿ ಆ್ಯಂಡ್ ಸೆಂಟರ್ ತಂಡವನ್ನು ಮಣಿಸಿತು.

ಮಿಡ್‌ಫೀಲ್ಡರ್ ಮೊಹಮ್ಮದ್ ಅಸ್ರಾರ್ ರೆಹಬರ್ (29, 34ನೇ ನಿಮಿಷ) ಎರಡು ಗೋಲು ಗಳಿಸಿದರೆ ಅಮೇಯ್ ಭಟ್ಕಳ್ (36ನೇ ನಿ) ಮತ್ತು ಹಾರ್ದಿಕ್ ಭಟ್ (81ನೇ ನಿ) ತಲಾ ಒಂದೊಂದು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ಎದುರಾಳಿ ತಂಡದ ಪರ ಏಕೈಕ ಗೋಲು ಗಳಿಸಿದವರು ಜೋತಿನ್ ಸಿಂಗ್ (13ನೇ ನಿ).

ಮತ್ತೊಂದು ಪಂದ್ಯದಲ್ಲಿ ಸೌತ್ ಯುನೈಟೆಡ್ ಎಫ್‌ಸಿ ತಂಡ ಸ್ಟೂಡೆಂಟ್ಸ್‌ ಯೂನಿಯನ್ ಎಫ್‌ಸಿಯನ್ನು 2–1ರಲ್ಲಿ ಸೋಲಿಸಿತು. ಸೌತ್ ಯುನೈಟೆಡ್ ಪರ ರಂಗ್‌ಸಿಂಗ್ ಮುಯ್ನೊ 45ನೇ ನಿಮಿಷದಲ್ಲೂ ಜೈಸನ್‌ ಜೋರ್ಡನ್ 60ನೇ ನಿಮಿಷದಲ್ಲೂ ಗೋಲು ಗಳಿಸಿದರು. ಸ್ಟೂಡೆಂಟ್ಸ್‌ಗಾಗಿ ಸುದರ್ಶನ್ ಲೋಕೂರ್ (78ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಪ್ರತಿಕ್ರಿಯಿಸಿ (+)