ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ವರ್ಷಗಳ ನಂತರ ಕೋಲ್ಕತ್ತದಲ್ಲಿ ಫುಟ್‌ಬಾಲ್‌ ತಂಡದ ತರಬೇತಿ

Last Updated 9 ಆಗಸ್ಟ್ 2021, 15:52 IST
ಅಕ್ಷರ ಗಾತ್ರ

ನವದೆಹಲಿ: ‘ಸಿಟಿ ಆಫ್‌ ಜಾಯ್‌’ ಖ್ಯಾತಿಯ ಕೋಲ್ಕತ್ತದಲ್ಲಿ 15 ವರ್ಷಗಳ ನಂತರ ಭಾರತ ಫುಟ್‌ಬಾಲ್‌ ತಂಡದ ತರಬೇತಿ ಶಿಬಿರ ಆಯೋಜಿಸಲಾಗಿದೆ.

‘ಮುಂದಿನ ತಿಂಗಳು ನಡೆಯುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಗಳಿಗೆ ಸಿದ್ಧತೆ ಕೈಗೊಳ್ಳುವ ಸಲುವಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿರುವ 23 ಆಟಗಾರರು ಹಾಗೂ ನೆರವು ಸಿಬ್ಬಂದಿ ಇದೇ 15ರಂದು ಕೋಲ್ಕತ್ತಕ್ಕೆ ಬಂದಿಳಿಯಲಿದ್ದಾರೆ. ಇದೇ 16ರಿಂದ ಶಿಬಿರ ಶುರುವಾಗಲಿದೆ. ಇದು ಸಂಪೂರ್ಣವಾಗಿ ಬಯೋ ಬಬಲ್‌ ವಾತಾವರಣದಲ್ಲೇ ನಡೆಯಲಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಪ್ರಕಟಣೆ ತಿಳಿಸಿದೆ.

ಭಾರತ ತಂಡವು 2006ರಲ್ಲಿ ಕೊನೆಯದಾಗಿ ಕೋಲ್ಕತ್ತದಲ್ಲಿ ತರಬೇತಿ ನಡೆಸಿತ್ತು.

‘ಬೆಂಗಳೂರು ಎಫ್‌ಸಿ ಮತ್ತು ಎಟಿಕೆ ಮೋಹನ್‌ ಬಾಗನ್‌ ಕ್ಲಬ್‌ಗಳು ಎಎಫ್‌ಸಿ ಕಪ್‌ನಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ ಈ ಕ್ಲಬ್‌ಗಳನ್ನು ಪ್ರತಿನಿಧಿಸುವ ಆಟಗಾರರು ತಡವಾಗಿ ಶಿಬಿರ ಸೇರಿಕೊಳ್ಳಲಿದ್ದಾರೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಇಗರ್‌ ಸ್ಟಿಮ್ಯಾಕ್‌ ತಿಳಿಸಿದ್ದಾರೆ.

ಶಿಬಿರದಲ್ಲಿ ಪಾಲ್ಗೊಳ್ಳುವ ಆಟಗಾರರು: ಗೋಲ್‌ಕೀಪರ್‌; ಧೀರಜ್‌ ಸಿಂಗ್‌, ವಿಶಾಲ್‌ ಕೇತ್‌. ಡಿಫೆಂಡರ್ಸ್‌; ಆಶಿಶ್‌ ರಾಯ್‌, ಸೆರಿಟನ್‌ ಫರ್ನಾಂಡೀಸ್‌, ಆದಿಲ್‌ ಖಾನ್‌, ಚಿಂಗ್ಲೆನ್‌ಸನಾ ಸಿಂಗ್‌, ನರೇಂದರ್‌, ರಾಹುಲ್‌ ಭೆಕೆ, ಆಕಾಶ್‌ ಮಿಶ್ರಾ, ಮಂದಾರರಾವ್‌ ದೇಸಾಯಿ. ಮಿಡ್‌ಫೀಲ್ಡರ್‌: ಲಾಲೆಂಗ್‌ಮಾವಿ, ಗ್ಲಾನ್‌ ಮಾರ್ಟಿನ್ಸ್‌, ಜೀಕ್‌ಸನ್‌ ಸಿಂಗ್‌, ಅನಿರುದ್ಧ್‌ ಥಾಪ, ಬ್ರೆಂಡನ್‌ ಫರ್ನಾಂಡೀಸ್‌, ಸಾಹಲ್‌ ಅಬ್ದುಲ್‌ ಸಮದ್‌, ಹಾಲಿಚರಣ್‌ ನರ್ಜರಿ, ಬಿಪಿನ್‌ ಸಿಂಗ್‌, ಯಾಸೀರ್‌ ಮಹಮ್ಮದ್‌. ಫಾರ್ವರ್ಡ್‌: ಕೆ.ಪಿ.ರಾಹುಲ್‌, ಫಾರುಖ್‌ ಚೌಧರಿ, ಇಶಾನ್‌ ಪಂಡಿತ್‌ ಮತ್ತು ರಹೀಂ ಅಲಿ.

ತಡವಾಗಿ ಶಿಬಿರ ಸೇರಲಿರುವ ಆಟಗಾರರು: ಗೋಲ್‌ಕೀಪರ್‌; ಅಮರಿಂದರ್‌ ಸಿಂಗ್‌, ಗುರುಪ್ರೀತ್‌ ಸಿಂಗ್‌ ಸಂಧು. ಡಿಫೆಂಡರ್ಸ್‌; ಪ್ರೀತಮ್‌ ಕೋಟಾಲ್‌, ಆಶುತೋಷ್‌ ಮೆಹ್ತಾ, ಸಂದೇಶ್‌ ಜಿಂಗಾನ್‌, ಸುಭಾಶಿಶ್‌ ಬೋಸ್‌. ಮಿಡ್‌ಫೀಲ್ಡರ್‌; ಉದಾಂತ್‌ ಸಿಂಗ್‌, ಪ್ರಣಯ್‌ ಹಲ್ದಾರ್‌, ಸುರೇಶ್‌ಸಿಂಗ್‌ ವಾಂಗ್‌ಜಮ್‌, ಆಶಿಕ್‌ ಕುರುಣಿಯನ್‌. ಫಾರ್ವರ್ಡ್‌: ಲಿಸ್ಟನ್‌ ಕೊಲಾಕೊ, ಮನ್ವೀರ್‌ ಸಿಂಗ್‌ ಹಾಗೂ ಸುನಿಲ್‌ ಚೆಟ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT