ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೋ ಕಪ್‌ ಫುಟ್‌ಬಾಲ್: ಕ್ವಾರ್ಟರ್‌ಗೆ ಫ್ರಾನ್ಸ್, ಸ್ಪೇನ್

Published 1 ಜುಲೈ 2024, 22:38 IST
Last Updated 1 ಜುಲೈ 2024, 22:38 IST
ಅಕ್ಷರ ಗಾತ್ರ

ಡೆಸೆಲ್ ಡಾರ್ಫ್ ಜರ್ಮನಿ: ಫ್ರಾನ್ಸ್ ತಂಡವು ಸೋಮವಾರ ಯುರೋ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ 1–0 ಯಿಂದ ಬೆಲ್ಜಿಯಂ ತಂಡವನ್ನು ಸೋಲಿಸಿ, ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. 

ರೋಚಕ ಹಣಾಹಣಿಯಲ್ಲಿ ಪಂದ್ಯ ಮುಗಿಯುವ ಕೊನೆಯ ಕ್ಷಣದಲ್ಲಿ ಬೆಲ್ಜಿಯಂ ಪರ ಡಿಫೆಂಡರ್ ಜಾನ್ ವೆರ್ಟೊಂಗೆನ್ (85ನೇ ನಿಮಿಷ) ಅವರು ಫ್ರಾನ್ಸ್‌ಗೆ ಗೋಲು ‘ಉಡುಗೊರೆ’ ನೀಡಿದರು. ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಫ್ರಾನ್ಸ್‌ ಅಭಿಮಾನಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. 

ಸ್ಕೋರ್ ಸಮಬಲ ಸಾಧಿಸಲು  ಬೆಲ್ಜಿಯಂ ಆಟಗಾರರು ಕೊನೆಯವರೆಗೂ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಫ್ರಾನ್ಸ್ ಮುಂದಿನ ಪಂದ್ಯದಲ್ಲಿ ಪೋರ್ಚುಗಲ್ ಅಥವಾ ಸ್ಲೊವೇನಿಯಾ ವಿರುದ್ಧ ಸೆಣಸಲಿದೆ.

ಸ್ಪೇನ್‌ಗೆ ಜಯ: ಮತ್ತೊಂದು ಪಂದ್ಯದಲ್ಲಿ ಸ್ಪೇನ್ ತಂಡ 4–1 ರಿಂದ ಜಾರ್ಜಿಯಾ ತಂಡವನ್ನು ಮಣಿಸಿ, ಕ್ವಾರ್ಟರ್‌ ಫೈನಲ್ ಪ್ರವೇಶಿಸಿತು.  

ಜಾರ್ಜಿಯ ಪರ ರಾಬಿನ್ ಲೆ ನಾರ್ಮಂಡ್ (18ನೇ ನಿಮಿಷ) ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಮೂರು ಗೋಲು ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT