ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೋ ಕಪ್‌ ಫುಟ್‌ಬಾಲ್: ಜರ್ಮನಿಗೆ ಮಣಿದ ಡೆನ್ಮಾರ್ಕ್

Published 30 ಜೂನ್ 2024, 23:18 IST
Last Updated 30 ಜೂನ್ 2024, 23:18 IST
ಅಕ್ಷರ ಗಾತ್ರ

ಡಾರ್ಟ್ಮಂಡ್: ಆತಿಥೇಯ ಜರ್ಮನಿ ತಂಡವು ಭಾನುವಾರ ಯುರೋ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ 2–0 ಯಿಂದ ಡೆನ್ಮಾರ್ಕ್ ತಂಡವನ್ನು ಮಣಿಸಿ, ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. 

ಕೈ ಹ್ಯಾವರ್ಟ್ಜ್ (53ನೇ ನಿಮಿಷ) ಮೊದಲ ಗೋಲು ಗಳಿಸಿದರೆ, ಜಮಾಲ್‌ ಮುಸಿಯಾಲ್‌ (68ನೇ ನಿಮಿಷ) ಜರ್ಮನಿಯ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಈ ಟೂರ್ನಿಯಲ್ಲಿ ಇದು ಜಮಾಲ್‌ ಅವರ ಮೂರನೇ ಗೋಲು. ಜರ್ಮನಿ ತಂಡದ ಪ್ರಬಲ ರಕ್ಷಣಾ ವ್ಯೂಹದಿಂದ ಡೆನ್ಮಾರ್ಕ್ ತಂಡಕ್ಕೆ ಗೋಲು ಗಳಿಸಲು ಅವಕಾಶ ಆಗಲಿಲ್ಲ. 

ಎರಡು ಪಂದ್ಯಗಳನ್ನು ಗೆದ್ದು, ಒಂದು ಪಂದ್ಯ ಡ್ರಾ ಸಾಧಿಸಿರುವ ಜರ್ಮನಿ, ಏಳು ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಮಳೆ ಸುರಿದ ಕಾರಣ ಸುಮಾರು 25 ನಿಮಿಷಗಳ ಕಾಲ ಆಟ ಸ್ಥಗಿತಗೊಂಡಿತು. 

ಜರ್ಮನಿ ಮುಂದಿನ ಪಂದ್ಯದಲ್ಲಿ ಸ್ಪೇನ್ ಅಥವಾ ಜಾರ್ಜಿಯಾ ವಿರುದ್ಧ ಸೆಣಸಲಿದೆ. 

ಸ್ವಿಜರ್ಲೆಂಡ್‌ಗೆ ಜಯ: ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ಸ್ವಿಜರ್ಲೆಂಡ್‌ 2-0 ಗೋಲುಗಳಿಂದ ಹಾಲಿ ಚಾಂಪಿಯನ್ ಇಟಲಿಯನ್ನು ಸೋಲಿಸಿದೆ. ಐದು ಅಂಕಗಳನ್ನು ಸಂಪಾದಿಸಿರುವ ಸ್ವಿಜರ್ಲೆಂಡ್‌ ಎರಡನೇ ಸ್ಥಾನದಲ್ಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT