ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ದಿಗ್ಗಜ ಆಟಗಾರ ಹಬೀಬ್‌ ನಿಧನ

Published 15 ಆಗಸ್ಟ್ 2023, 16:15 IST
Last Updated 15 ಆಗಸ್ಟ್ 2023, 16:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಮೊಹಮ್ಮದ್‌ ಹಬೀಬ್‌ (74) ಅವರು ತಮ್ಮ ಹುಟ್ಟೂರು ಹೈದರಾಬಾದ್‌ನಲ್ಲಿ ಮಂಗಳವಾರ ನಿಧನರಾದರು.

ಕಳೆದ ಕೆಲ ವರ್ಷಗಳಿಂದ ಅವರು ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ.‌

ಮಿಡ್‌ಫೀಲ್ಡರ್‌ ಆಗಿದ್ದ ಅವರು 1970ರ ಬ್ಯಾಂಕಾಕ್‌ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದ ಭಾರತ ತಂಡದಲ್ಲಿ ಆಡಿದ್ದರು. 1960ರ ದಶಕದ ಕೊನೆ ಮತ್ತು 70ರ ದಶಕದ ಅವಧಿಯ ತಮ್ಮ ವೃತ್ತಿಜೀವನದಲ್ಲಿ ಮೋಹನ್‌ ಬಾಗನ್, ಈಸ್ಟ್‌ ಬೆಂಗಾಲ್‌ ಮತ್ತು ಮಹಮಡನ್‌ ಸ್ಪೋರ್ಟಿಂಗ್‌ ತಂಡಗಳನ್ನು ಪ್ರತಿನಿಧಿಸಿದ್ದರು.

ಫುಟ್‌ಬಾಲ್‌ ದಂತಕತೆ ಬ್ರೆಜಿಲ್‌ನ ಪೆಲೆ ಅವರನ್ನೊಳಗೊಂಡ ನ್ಯೂಯಾರ್ಕ್‌ ಕಾಸ್ಮೋಸ್‌ ತಂಡದ ವಿರುದ್ಧ 1977 ರಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯದಲ್ಲಿ ಅವರು ಮೋಹನ್‌ ಬಾಗನ್‌ ತಂಡದಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಒಂದು ಗೋಲು ಗಳಿಸಿದ್ದ ಅವರ ಆಟವನ್ನು ಪೆಲೆ ಕೊಂಡಾಡಿದ್ದರು.

ಆಟಗಾರನಾಗಿದ್ದ ಅವಧಿಯಲ್ಲಿ ಹಬೀಬ್‌ ಅವರನ್ನು ಅರಸಿಕೊಂಡು ಹಲವು ಉದ್ಯೋಗಾವಕಾಶಗಳು ಬಂದಿದ್ದರೂ, ಎಲ್ಲವನ್ನೂ ತಿರಸ್ಕರಿಸಿದ್ದರು. ಇದರಿಂದ ದೇಶದ ಮೊದಲ ‘ನೈಜ ವೃತ್ತಿಪರ ಫುಟ್‌ಬಾಲ್‌ ಆಟಗಾರ’ ಎಂಬ ಹೆಸರಿನಿಂದಲೂ ಅವರು ಗುರುತಿಸಿಕೊಂಡಿದ್ದರು.

ನಿವೃತ್ತಿಯ ಬಳಿಕ ಅವರು ಟಾಟಾ ಫುಟ್‌ಬಾಲ್‌ ಅಕಾಡೆಮಿ ಮತ್ತು ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿರುವ ಭಾರತ ಫುಟ್‌ಬಾಲ್‌ ಸಂಸ್ಥೆ ಅಕಾಡೆಮಿಯಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT