ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯೂರೋ ಕಪ್ ಫುಟ್‌ಬಾಲ್: ಇಟಲಿಗೆ ಮಣಿದ ಅಲ್ಬೇನಿಯಾ

ಯುರೋ ಕಪ್: ಬೆಸ್ಟೋನಿ, ಬರೇಲಿ ಗೋಲುಗಳಿಗೆ ಒಲಿದ ಜಯ
Published 16 ಜೂನ್ 2024, 14:09 IST
Last Updated 16 ಜೂನ್ 2024, 14:09 IST
ಅಕ್ಷರ ಗಾತ್ರ

ಡಾರ್ಟ್‌ಮಂಡ್, ಜರ್ಮನಿ: ಇಟಲಿ ತಂಡವು ಯೂರೋ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯ ಆರಂಭವಾಗಿ 23 ಸೆಕೆಂಡುಗಳಲ್ಲಿ  ಎದುರಾಳಿ ಅಲ್ಬೇನಿಯಾಗೆ ‘ಉಡುಗೊರೆ’ ಗೋಲು ಕೊಟ್ಟಿತು. ನಂತರದ ಆಟದಲ್ಲಿ ಪುಟಿದೆದ್ದು ಗೆಲುವನ್ನೂ ಸಾಧಿಸಿತು. 

ಶನಿವಾರ ತಡರಾತ್ರಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಇಟಲಿ ತಂಡವು 2–1ರಿಂದ ಅಲ್ಬೇನಿಯಾ ವಿರುದ್ಧ ಜಯಿಸಿತು. 64 ವರ್ಷಗಳ ನಂತರ ಈ ಸಾಧನೆ ಮಾಡಿತು. 

ಪಂದ್ಯ ಆರಂಭವಾದ 23ನೇ ಸೆಕೆಂಡಿನಲ್ಲಿ ಇಟಲಿಯ ನೆದಿಮ್ ಬೆಜ್ರಾಮಿ ಅವರು ಅಲ್ಬೇನಿಯಾಕ್ಕೆ ಗೋಲು ‘ಉಡುಗೊರೆ’ ನೀಡಿದರು. ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಅಲ್ಬೆನಿಯನ್ ಅಭಿಮಾನಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. 

ಈ ತಪ್ಪನ್ನು ಸರಿಪಡಿಸಲು ಇಟಲಿಗೆ ಹತ್ತು ನಿಮಿಷಗಳ ಸಮಯ ಬೇಕಾಯಿತು. 11ನೇ ನಿಮಿಷದಲ್ಲಿ ಅಲೆಕ್ಸಾಂದ್ರೊ ಬೆಸ್ಟೊನಿ ಗೋಲು ಹೊಡೆದು ತಂಡಕ್ಕೆ ಸಮಬಲದ ಸಮಾಧಾನ ನೀಡಿದರು. 

ಇದಾಗಿ ಐದು ನಿಮಿಷ ಕಳೆದಾಗ ಇಟಲಿ 2–1ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. 16ನೇ ನಿಮಿಷದಲ್ಲಿ ಬ್ಯಾಕ್‌ ಪೋಸ್ಟ್‌ನಿಂದ ಲೊರೆಂಝೊ ಪೆಲೆಗ್ರಿನಿ ಕ್ರಾಸ್ ಮಾಡಿದ ಚೆಂಡನ್ನು ಪಡೆದ ನಿಕೊಲೊ ಬರೆಲಿ ಗೋಲ್‌ಕೀಪರ್ ವಂಚಿಸುವಲ್ಲಿ ಯಶಸ್ವಿಯಾದರು. 

ಇಂದಿನ ಪಂದ್ಯಗಳು

ಸರ್ಬಿಯಾ–ಇಂಗ್ಲೆಂಡ್

ರೊಮೆನಿಯಾ–ಉಕ್ರೇನ್

ಬೆಲ್ಜಿಯಂ–ಸ್ಲೋವಾಕಿಯಾ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT