ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವೀರ್ ಮಿಂಚಿನಾಟ: ಓಜೋನ್ ಎಫ್‌ಸಿ

Last Updated 19 ಡಿಸೆಂಬರ್ 2018, 20:27 IST
ಅಕ್ಷರ ಗಾತ್ರ

ಬೆಂಗಳೂರು: ಮನವೀರ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಓಜೋನ್ ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್‌ ಟೂರ್ನಿಯಲ್ಲಿ ಬುಧವಾರ ಜಯ ಗಳಿಸಿತು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಡಿಇ ತಂಡವನ್ನು ಓಜೋನ್‌ 2–0ಯಿಂದ ಸೋಲಿಸಿತು.

ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ದ್ವಿತೀಯಾರ್ಧದಲ್ಲಿ ಮನವೀರ್‌ ಮಿಂಚಿನ ಆಟವಾಡಿದರು. 64 ಮತ್ತು 89ನೇ ನಿಮಿಷದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿದರು.

ಮತ್ತೊಂದು ಪಂದ್ಯದಲ್ಲಿ ಎಎಸ್‌ಸಿ ಆ್ಯಂಡ್ ಸೆಂಟರ್‌ ತಂಡದವರು ಸ್ಟೂಡೆಂಟ್ಸ್‌ ಯೂನಿಯನ್‌ ಜೊತೆ 3–3ರಿಂದ ಡ್ರಾ ಮಾಡಿಕೊಂಡರು. ಇಮ್ಯಾನ್ಯುಯೆಲ್‌ ಆರನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಟೂಡೆಂಟ್ಸ್ ಯೂನಿಯನ್‌ಗೆ ಮುನ್ನಡೆ ಗಳಿಸಿಕೊಟ್ಟರು. ಆದರೆ ತಂಡದ ದೀಪಕ್‌ 13ನೇ ನಿಮಿಷದಲ್ಲಿ ಉಡುಗೊರೆ ಗೋಲು ನೀಡಿದ ಕಾರಣ ಎದುರಾಳಿ ತಂಡದವರು ಸಮ ಮಾಡಿಕೊಂಡರು. 39ನೇ ನಿಮಿಷದಲ್ಲಿ ಇಮ್ಯಾನ್ಯುಯೆಲ್‌ ಮತ್ತೊಂದು ಗೋಲು ಗಳಿಸಿದರು. 75ನೇ ನಿಮಿಷದಲ್ಲಿ ಸುಂದರ್‌ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. ಆದರೆ ಎದುರಾಳಿ ತಂಡದ ಸಮಾನಂದ (75ನೇ ನಿ) ಮತ್ತು ಜ್ಯೋತಿನ್ ಸಿಂಗ್ (90+2) ಗಳಿಸಿದ ಗೋಲುಗಳ ಮೂಲಕ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT