ಗುರುವಾರ , ಅಕ್ಟೋಬರ್ 29, 2020
27 °C

ಒಡಿಶಾ ಎಫ್‌ಸಿ ಆಟಗಾರರ ಅಭ್ಯಾಸ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಒಡಿಶಾ ಎಫ್‌ಸಿ ತಂಡದಲ್ಲಿರುವ ಭಾರತದ ಆಟಗಾರರು ಶನಿವಾರ ಗೋವಾದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿದೇಶಿ ಆಟಗಾರರು ಹೋಟೆಲ್ ಕೊಠಡಿ ಸೇರಿದ್ದು ಶೀಘ್ರದಲ್ಲೇ ಅಭ್ಯಾಸಕ್ಕೆ ಇಳಿಯಲಿದ್ದಾರೆ. 

ಕೋವಿಡ್ ಹಿನ್ನೆಲೆಯಲ್ಲಿ ಐಎಸ್‌ಎಲ್ ಆಯೋಜಕರು ಸಿದ್ಧಪಡಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಕೊಂಡು ಅಭ್ಯಾಸ ಆರಂಭಿಸಲಾಗಿದ್ದು ಕೋಚ್ ಸ್ಟೀವನ್ ಡಯಾಸ್ ಅವರು ತಂಡದೊಂದಿಗೆ ಇದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿರುವ ಮಿಡ್‌ಫೀಲ್ಡ್ ಆಟಗಾರ ಡಯಾಸ್ ಅವರು ಭಾರತ ತಂಡದ ಸಹಾಯಕ ಕೋಚ್‌ ಆಗಿದ್ದರು.

‘ಫಿಟ್‌ನೆಸ್ ಕಾಯ್ದುಕೊಳ್ಳುವುದಕ್ಕಾಗಿ ಆಟಗಾರರು ಹೋಟೆಲ್ ಕೊಠಡಿಗಳಲ್ಲಿ ಭಾರಿ ಬೆವರು ಸುರಿಸಿದ್ದಾರೆ. ತಂಡದ ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್ ಕಾಸನೋವಾ ಅವರು ಆಟಗಾರರ ಬಗ್ಗೆ ನಿಗಾ ವಹಿಸಿದ್ದರು’ ಎಂದು ಡಯಾಸ್ ಹೇಳಿದರು.

‘ಅನೇಕ ತಿಂಗಳುಗಳ ನಂತರ ಆಟಗಾರರು ಮತ್ತು ಸಿಬಂದಿ ಕ್ರೀಡಾಂಗಣಕ್ಕೆ ಇಳಿದಿದ್ದಾರೆ. ಆದ್ದರಿಂದ ಈ ತರಬೇತಿಯು ತಂಡದ ಪ್ರತಿಯೊಬ್ಬರಿಗೂ ಮಹತ್ವದ್ದಾಗಿದೆ’ ಎಂದು ಒಡಿಶಾ ಎಫ್‌ಸಿಯ ಫುಟ್‌ಬಾಲ್ ಆಪರೇಷನ್ಸ್ ಮುಖ್ಯಸ್ಥ ಅಭಿಕ್ ಚಾಟರ್ಜಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.