ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್ ತಂಡದ ಕೋಚ್‌ ಫರ್ನಾಂಡೊ ಸ್ಯಾಂಟೊಸ್‌ ರಾಜೀನಾಮೆ

Last Updated 17 ಡಿಸೆಂಬರ್ 2022, 19:17 IST
ಅಕ್ಷರ ಗಾತ್ರ

ಲಿಸ್ಬನ್‌ (ಎಎಫ್‌ಪಿ): ಪೋರ್ಚುಗಲ್ ತಂಡದ ಕೋಚ್‌ ಫರ್ನಾಂಡೊ ಸ್ಯಾಂಟೊಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪೋರ್ಚುಗಲ್ ಫುಟ್‌ಬಾಲ್ ಫೆಡರೇಷನ್‌ (ಎಫ್‌ಪಿಎಫ್‌) ಈ ವಿಷಯ ತಿಳಿಸಿದೆ.

ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡವು ಮೊರೊಕ್ಕೊ ಎದುರು ಮುಗ್ಗರಿಸಿತ್ತು. ಎಂಟು ವರ್ಷಗಳಿಂದ ರಾಷ್ಟ್ರೀಯ ತಂಡದ ಕೋಚ್‌ ಆಗಿದ್ದ 68 ವರ್ಷದ ಫರ್ನಾಂಡೊ, ತಾವು ಹುದ್ದೆಯಿಂದ ಬಲವಂತವಾಗಿ ಕೆಳಗಿಳಿಯುವುದಿಲ್ಲ ಎಂದಿದ್ದರು.

ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯಗಳಲ್ಲಿ ಪ್ರಮುಖ ಆಟಗಾರ ರೊನಾಲ್ಡೊ ಅವರನ್ನು ಹೊರಗಿಟ್ಟ ಅವರ ನಿರ್ಧಾರವನ್ನು ಬಹಳಷ್ಟು ಜನ ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT