ಫುಟ್‌ಬಾಲ್‌: ಭಾರತಕ್ಕೆ ಜಯ

7

ಫುಟ್‌ಬಾಲ್‌: ಭಾರತಕ್ಕೆ ಜಯ

Published:
Updated:

ಢಾಕಾ: ಆಶಿಕ್‌ ಕುರುನಿಯನ್‌ ಹಾಗೂ ಲಾಲಿಂಜುಲಾ ಚಾಂಗ್ತೆ ಅವರು ಗಳಿಸಿದ ಗೋಲುಗಳ ನೆರವಿನಿಂದ 16 ವರ್ಷದೊಳಗಿನವರ ಭಾರತ ಫುಟ್‌ಬಾಲ್‌ ತಂಡವು ಸೌತ್‌ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಎಸ್‌ಎಎಫ್‌ಎಫ್‌) ಆಯೋಜಿಸಿರುವ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದಿದೆ.

ಬುಧವಾರ ನಡೆದ ಪಂದ್ಯದಲ್ಲಿ ಭಾರತ, 2–0 ಗೋಲುಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು.

ಪಂದ್ಯದ 35ನೇ ನಿಮಿಷದಲ್ಲಿ ಆಶಿಕ್‌ ಅವರು ಮೊದಲ ಗೋಲು ದಾಖಲಿಸಿ ತಂಡವು 1–0 ಮುನ್ನಡೆ ಹೊಂದಲು ನೆರವಾದರು. 47ನೇ ನಿಮಿಷದಲ್ಲಿ ಲಾಲಿಂಜುಲಾ ಚಾಂಗ್ತೆ ಅವರು ಎರಡನೇ ಗೋಲು ಗಳಿಸಿದರು. 2–0 ಮುನ್ನಡೆಯೊಂದಿಗೆ ಭಾರತ ತಂಡವು ಪಂದ್ಯದ ಉಳಿದ ಅವಧಿಯಲ್ಲಿ ಎಚ್ಚರಿಕೆಯ ಆಟವಾಡಿತು. ವಿಜಯೀ ತಂಡದ ರಕ್ಷಣಾ ಪಡೆಯ ಭದ್ರಕೋಟೆ ದಾಟಲು ಎದುರಾಳಿ ತಂಡಕ್ಕೆ ಸಾಧ್ಯವಾಗಲಿಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !