ಫಿಫಾ: ನಾಕೌಟ್ ಹಂತಕ್ಕೆ ಸ್ವಿಟ್ಜರ್ಲೆಂಡ್‌

7

ಫಿಫಾ: ನಾಕೌಟ್ ಹಂತಕ್ಕೆ ಸ್ವಿಟ್ಜರ್ಲೆಂಡ್‌

Published:
Updated:
ಕೋಸ್ಟರಿಕಾದ ಜೋಯೆಲ್‌ ಕ್ಯಾಂಬೆಲ್‌ ಮತ್ತು ಸ್ವಿಟ್ಜರ್ಲೆಂಡ್‌ನ ಮೈಕೆಲ್‌ ಲಾಂಗ್ ಅವರು ಚೆಂಡಿಗಾಗಿ ಶ್ರಮಿಸಿದ ಸಂದರ್ಭ ಎಎಫ್‌ಪಿ ಚಿತ್ರ

ನಿಜ್ನಿ : ಮೊದಲ ಜಯದ ಕನಸು ಹೊತ್ತು ಅಂಗಣಕ್ಕೆ ಇಳಿದ ಕೋಸ್ಟರಿಕಾ ತಂಡದ ಕನಸು ಭಗ್ನಗೊಳಿಸಿದ ಸ್ವಿಟ್ಜರ್ಲೆಂಡ್‌ ವಿಶ್ವಕಪ್ ಟೂರ್ನಿಯ ಪ್ರೀ ಕ್ವಾರ್ಟರ್‌ ಹಂತಕ್ಕೇರಿತು. ನಿಜ್ನಿ ನೊವ್‌ಗರೊಡ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ‘ಇ’ ಗುಂಪಿನ ಪಂದ್ಯ 2–2ರಿಂದ ಡ್ರಾಗೊಂಡಿತು.

ಈ ಮೂಲಕ ಐದು ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಂಡ ಸ್ವಿಟ್ಜರ್ಲೆಂಡ್‌ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಬ್ರೆಜಿಲ್ ಎದುರಿನ ಪಂದ್ಯದಲ್ಲಿ ಸರ್ಬಿಯಾ ಸೋತ ಕಾರಣ ಈ ತಂಡದ ಹಾದಿ ಸುಗಮವಾಯಿತು.

ಟೂರ್ನಿಯಲ್ಲಿ ಮೊದಲ ಗೋಲು ಗಳಿಸಿದ ಕೋಸ್ಟರಿಕಾ ಮೊದಲ ಪಾಯಿಂಟ್‌ ಕೂಡ ಗಳಿಸಿದ ಖುಷಿಯೊಂದಿಗೆ ಮರಳಿತು. ಮೊದಲ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗದ ಕೋಸ್ಟರಿಕಾ ಈ ಪಂದ್ಯದ ಆರಂಭದಲ್ಲೇ ಅಮೋಘ ಆಟವಾಡಿತು. ಆದರೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ನಿಧಾನಕ್ಕೆ ಲಯ ಕಂಡುಕೊಂಡ ಸ್ವಿಟ್ಜರ್ಲೆಂಡ್‌ ತಂಡ ಕೋಸ್ಟರಿಕಾಗೆ ಭಾರಿ ಪೈಪೋಟಿ ನೀಡಿತು. 31ನೇ ನಿಮಿಷದಲ್ಲಿ ಜೆಮಾಲಿ ಗಳಿಸಿದ ಗೋಲಿನೊಂದಿಗೆ ಸ್ವಿಟ್ಜರ್ಲೆಂಡ್‌ ಮುನ್ನಡೆ ಸಾಧಿಸಿತು. 51ನೇ ನಿಮಿಷದಲ್ಲಿ ವ್ಯಾಟ್ಸನ್ ಗಳಿಸಿದ ಗೋಲಿನ ಮೂಲಕ ಕೋಸ್ಟರಿಕಾ ತಿರುಗೇಟು ನೀಡಿತು. 88ನೇ ನಿಮಿಷದಲ್ಲಿ ಡ್ರಿಮಿಕ್ ಅವರು ಚೆಂಡನ್ನು ಗುರಿ ಮುಟ್ಟಿಸಿ ಸ್ವಿಟ್ಜರ್ಲೆಂಡ್‌ ಜಯದ ಹಾದಿಯಲ್ಲಿ ಸಾಗುವಂತೆ ಮಾಡಿದ್ದರು. ಆದರೆ 90+3ನೇ ನಿಮಿಷದಲ್ಲಿ ಸೋಮರ್‌, ಉಡುಗೊರೆ ಗೋಲು ನೀಡಿ ಪಂದ್ಯ ಡ್ರಾ ಆಗುವಂತೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !