ಬುಧವಾರ, ಜನವರಿ 19, 2022
18 °C
ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್‌: ಒಡಿಶಾ ಎದುರಾಳಿ

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್‌: ಈಸ್ಟ್‌ ಬೆಂಗಾಲ್‌ಗೆ ಜಯದ ಹಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ: ಈ ಆವೃತ್ತಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದೆ.

ಒಡಿಶಾ ಎಫ್‌ಸಿ ಆಡಿದ ಮೊದಲ ಪಂದ್ಯದಲ್ಲಿ 3–1ರಿಂದ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿತ್ತು. ಅದೇ ಲಯವನ್ನು ಮುಂದುವರಿಸುವ ತವಕದಲ್ಲಿ ತಂಡವಿದೆ. ಬದ್ಧ ಎದುರಾಳಿ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ವಿರುದ್ಧ ಕಣಕ್ಕಿಳಿದಿದ್ದ ಮೊದಲ ಹಣಾಹಣಿಯಲ್ಲಿ ಈಸ್ಟ್ ಬೆಂಗಾಲ್‌ ನಿರಾಸೆ ಅನುಭವಿಸಿದ್ದು, ಈ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ.

‘ಈ ಪಂದ್ಯವನ್ನು ಜಯಿಸಿ ಮೂರು ಪಾಯಿಂಟ್ಸ್ ಗಳಿಸುವುದು ನಮ್ಮ ಏಕೈಕ ಉದ್ದೇಶ‘ ಎಂದು ಈಸ್ಟ್ ಬೆಂಗಾಲ್ ತಂಡದ ಕೋಚ್‌ ಜೋಸ್ ಮ್ಯಾನ್ಯುಯೆಲ್‌ ದಿಯಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಟಿಕೆಎಂಬಿ ಎದುರಿನ ಪಂದ್ಯದಲ್ಲಿ ಗಾಯಗೊಂಡಿದ್ದ ಈಸ್ಟ್‌ ಬೆಂಗಾಲ್ ನಾಯಕ ಅರಿಂದಮ್ ಭಟ್ಟಾಚಾರ್ಯ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ.

ಪಂದ್ಯ ಆರಂಭ: ರಾತ್ರಿ 7.30

ಸ್ಥಳ:ತಿಲಕ್ ಕ್ರೀಡಾಂಗಣ, ವಾಸ್ಕೊ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು