ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್‌: ಮಿಸಾಕ ತಂಡಕ್ಕೆ ಜಯ

Last Updated 18 ಫೆಬ್ರುವರಿ 2019, 12:10 IST
ಅಕ್ಷರ ಗಾತ್ರ

ಬೆಂಗಳೂರು: ದೇವಿಕಾ ಮತ್ತು ವಿಪಿನಾ ಅವರ ಕಾಲ್ಚಳಕದ ನೆರವಿನಿಂದ ಮಿಸಾಕ ಯುನೈಟೆಡ್‌ ಎಫ್‌ಸಿ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಆಶ್ರಯದ ಮಹಿಳಾ ಸೂಪರ್‌ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮಿಸಾಕ 2–0 ಗೋಲುಗಳಿಂದ ಇಂಡಿಯನ್‌ ಫುಟ್‌ಬಾಲ್‌ ಫ್ಯಾಕ್ಟರಿ (ಐಎಫ್‌ಎಫ್‌) ತಂಡವನ್ನು ಮಣಿಸಿತು.

ದೇವಿಕಾ 29ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 72ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ವಿಪಿನಾ, ಮಿಸಾಕ ತಂಡದ ಸಂಭ್ರಮಕ್ಕೆ ಕಾರಣರಾದರು.

ದಿನದ ಇನ್ನೊಂದು ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ (ಎಂಯುಎಫ್‌ಸಿ) ತಂಡ 3–2 ಗೋಲುಗಳಿಂದ ಪರಿಕ್ರಮ ತಂಡವನ್ನು ಸೋಲಿಸಿತು.

ಮಂಗಳೂರು ತಂಡದ ಡಯಾನ ಹ್ಯಾಟ್ರಿಕ್‌ ಗೋಲು ಗಳಿಸಿ ಸಂಭ್ರಮಿಸಿದರು. ಅವರು 22, 33 ಮತ್ತು 73ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿದರು.

ಪರಿಕ್ರಮ ತಂಡದ ಶೀತಲ್‌ ಮತ್ತು ಪಲ್ಲವಿ, ಕ್ರಮವಾಗಿ 28 ಮತ್ತು 80ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT