ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್‌ಗೆ ಸೋಲು

ಶನಿವಾರ, ಮೇ 25, 2019
32 °C

ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್‌ಗೆ ಸೋಲು

Published:
Updated:

ಲುಧಿಯಾನ : ಬೆಂಗಳೂರು ಯುನೈಟೆಡ್‌ ಎಫ್‌ಸಿ ತಂಡ ಮಹಿಳಾ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಸೋತಿದೆ.

ಗುರುನಾನಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪೈಪೋಟಿಯಲ್ಲಿ ಸೇತು ಎಫ್‌ಸಿ 3–0 ಗೋಲುಗಳಿಂದ ಬೆಂಗಳೂರು ಯುನೈಟೆಡ್‌ ಎದುರು ಗೆದ್ದಿತು.

ಸೇತು ಎಫ್‌ಸಿ ತಂಡದ ಸಬಿತ್ರಾ ಭಂಡಾರಿ (11ನೇ ನಿಮಿಷ), ಸಂಧ್ಯಾ (42ನೇ ನಿ.) ಮತ್ತು ಅನಿತಾ ಬಾಸ್ನೆಟ್‌ (75ನೇ ನಿ.) ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು.

ಇನ್ನೊಂದು ಪಂದ್ಯದಲ್ಲಿ ಮಣಿಪುರ ಪೊಲೀಸ್‌ 10–0 ಗೋಲುಗಳಿಂದ ಸಾಯ್‌–ಎಸ್‌ಟಿಸಿ ಕಟಕ್‌ ತಂಡದ ಎದುರು ಜಯಭೇರಿ ಮೊಳಗಿಸಿತು.

ವಿಜಯಿ ತಂಡದ ಬಾಲಾದೇವಿ ‘ಹ್ಯಾಟ್ರಿಕ್‌ ಡಬಲ್‌’ ಸಾಧನೆ ಮಾಡಿದರು.  ಒಟ್ಟು ಏಳು ಗೋಲು ಗಳಿಸಿ ಗಮನ ಸೆಳೆದರು. ಅವರು 10, 15, 41, 45+2, 54, 78 ಮತ್ತು 83ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು.

ರೀನಾರಾಯ್‌ ದೇವಿ 38 ಮತ್ತು 81ನೇ ನಿಮಿಷಗಳಲ್ಲಿ ಗೋಲು ಹೊಡೆದರು. ದಯಾ ದೇವಿ ಕೂಡಾ ಕಾಲ್ಚಳಕ ತೋರಿದರು. ಅವರು 58ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !