ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಯೂತ್‌ ಬಾಕ್ಸಿಂಗ್‌: ಕ್ವಾರ್ಟರ್‌ಫೈನಲ್‌ಗೆ ರವೀನಾ

Last Updated 19 ನವೆಂಬರ್ 2022, 20:34 IST
ಅಕ್ಷರ ಗಾತ್ರ

ನವದೆಹಲಿ: ಹಾಲಿ ಏಷ್ಯಾ ಚಾಂಪಿಯನ್‌, ಭಾರತದ ರವೀನಾ ಅವರು ವಿಶ್ವ ಯೂತ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ 63 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ರವೀನಾ, ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಹಂಗರಿಯ ವಾರ್ಗಾ ಫ್ರಾನ್ಸಿಸ್ಕಾ ರೋಜಿ ಅವರನ್ನು ಆರ್‌ಎಸ್‌ಸಿ (ರೆಫರಿಯಿಂದ ಪಂದ್ಯ ಸ್ಥಗಿತ) ಆಧಾರದಲ್ಲಿ ಸೋಲಿಸಿದರು.

ಆರಂಭದಿಂದಲೇ ಜಿದ್ದಾಜಿದ್ದಿ ಪೈಪೋಟಿ ನಡೆದ ಬೌಟ್‌ನಲ್ಲಿ ರವೀನಾ ಬಿರುಸಿನ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಎಂಟರಘಟ್ಟಕ್ಕೆ ಕುಂಜರಾಣಿ, ಮೋಹಿತ್‌: ಮಹಿಳೆಯರ 60 ಕೆಜಿ ವಿಭಾಗದಲ್ಲಿ ಕುಂಜರಾಣಿ ದೇವಿ ಥೋಂಗಮ್‌ ಮತ್ತು ಪುರುಷರ 86 ಕೆಜಿ ವಿಭಾಗದಲ್ಲಿ ಮೋಹಿತ್ ಕೂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

16ರ ಘಟ್ಟದ ಹಣಾಹಣಿಯಲ್ಲಿ ಕುಂಜರಾಣಿ 5–0ಯಿಂದ ಸ್ಪೇನ್‌ನ ಹೊರ್ಚೆ ಮಾರ್ಟಿನೆಜ್‌ ಮರಿಯಾ ಅವರನ್ನು ಸೋಲಿಸಿದರು.

71 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಭಾರತದ ಸಾಹಿಲ್ ಚೌಹಾನ್‌ 5–0ಯಿಂದ ಅಜರ್‌ಬೈಜಾನ್‌ನ ಡೇನಿಯಲ್‌ ಹೊಲೊಸ್ಟೆಂಕೊ ಎದುರು ಗೆದ್ದು, ಪ್ರೀಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ನಿಖಿಲ್‌ (57 ಕೆಜಿ), ಹರ್ಷ (60 ಕೆಜಿ) ಅವರು 32ರ ಘಟ್ಟದ ಬೌಟ್‌ಗಳಲ್ಲಿ ಸೋಲನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT