ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಮಂಜಿತ್‌ಗೆ ಕಂಚಿನ ಪದಕ

Published 1 ಜೂನ್ 2023, 20:52 IST
Last Updated 1 ಜೂನ್ 2023, 20:52 IST
ಅಕ್ಷರ ಗಾತ್ರ

ಬಿಷ್ಕೆಕ್‌ (ಕಿರ್ಗಿಸ್ಥಾನ): ಭಾರತ ಮಂಜೀತ್‌ ಅವರು ಯುಡಬ್ಲ್ಯುಡಬ್ಲ್ಯು ರ್‍ಯಾಂಕಿಂಗ್‌ ಸಿರೀಸ್‌ ಕುಸ್ತಿ ಸ್ಪರ್ಧೆಯ ಗ್ರೀಕೊ ರೋಮನ್‌ 55 ಕೆ.ಜಿ. ವಿಭಾಗದಲ್ಲಿ ಗುರುವಾರ ಕಂಚಿನ ಪದಕ ಗೆದ್ದುಕೊಂಡರು. ಆ ಮೂಲಕ ಭಾರತ ಪದಕದ ಖಾತೆ ತೆರೆಯಿತು.

ಮಂಜೀತ್‌, ಉಜ್ಬೇಕಿಸ್ತಾನದ ಇಕ್ತಿಯಾರ್‌ ಬೊಟಿರೊವ್ ಅವರೆದುರು ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದರು. ಆದರೆ ಬೊಟಿರೊವ್‌ ಫೈನಲ್‌ ತಲುಪಿದ ಕಾರಣ ಎರಡು ಕಂಚಿನ ಪದಕಗಳಲ್ಲಿ ಒಂದಕ್ಕೆ ಸೆಣಸಾಡುವ ಅವಕಾಶ ಭಾರತೀಯ ಪೈಲ್ವಾನನಿಗೆ ದೊರೆಯಿತು. ಮಂಜೀತ್‌ ಈ ಅವಕಾಶದಲ್ಲಿ ಕಜಕಸ್ತಾನದ ಯೆರ್ಸಿನ್‌ ಅಬಿರ್‌ ಅವರನ್ನು 14–9 ರಿಂದ ಸೋಲಿಸಿದರು.

ಈ ವಿಭಾಗದ ಫೈನಲ್‌ನಲ್ಲಿ ಕಜಕಸ್ತಾನದ ಮರ್ಲಾನ್‌ ಮುಕಶೇವ್, ಬೊಟಿರೋವ್‌ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡರು.

60 ಕೆ.ಜಿ. ವಿಭಾಗದಲ್ಲಿ ಸುಮಿತ್‌ ರಿಪೇಚ್‌ ಸುತ್ತು ತಲುಪಿ, ಅಲ್ಲಿ ಕಿರ್ಗಿಸ್ತಾನದ ಬಲ್ಬಾಯ್ ದೊರ್ಡೊಕೊವ್ ಅವರಿಗೆ ಮಣಿದರು. 67 ಕೆ.ಜಿ ವಿಭಾಗದಲ್ಲಿ ನೀರಜ್‌ ಸಹ ರಿಪೇಚ್‌ನಲ್ಲಿ ಸೋತರು. ಭಾರತದ ಇತರ ಮೂವರು– ಸುನೀಲ್‌ ಕುಮಾರ್‌ (87 ಕೆ.ಜಿ), ನರಿಂದರ್ ಚೀಮಾ (97 ಕೆ.ಜಿ) ಮತ್ತು ಸಾಹಿಲ್‌ (130 ಕೆ.ಜಿ) ಅರ್ಹತಾ ಹಂತದಲ್ಲೇ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT