ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ: ಸಾಕ್ಷಿ, ಬಜರಂಗ್‌ ಸಾರಥ್ಯ

Last Updated 8 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ದೆಹಲಿ: ಒಲಿಂಪಿಕ್‌ ವಿಜೇತೆ ಸಾಕ್ಷಿ ಮಲ್ಲಿಕ್‌ ಹಾಗೂ ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ಗೆದ್ದಿರುವ ಭಜರಂಗ್‌ ಪುನಿಯಾ ಅವರ ನೇತೃತ್ವದಲ್ಲಿ 30 ಜನರ ತಂಡವು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಂಗೇರಿಯ ಬುಡಪೆಸ್ಟ್‌ನಲ್ಲಿ ಅಕ್ಟೋಬರ್‌ 20ರಿಂದ 28ರವರೆಗೆ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ಜರುಗಲಿದೆ.

ರೆಸ್ಲಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾವು (ಡಬ್ಲ್ಯೂಎಫ್‌ಐ) ಫ್ರೀ ಸ್ಟೈಲ್‌, ಗ್ರಿಕೊ ರೋಮನ್‌ ಹಾಗೂ ಮಹಿಳಾ ರೆಸ್ಲಿಂಗ್‌ ವಿಭಾಗದಲ್ಲಿ ತಲಾ ಹತ್ತು ಮಂದಿಯನ್ನು ಆಯ್ಕೆ ಮಾಡಿದೆ.

ಫ್ರೀ ಸ್ಟೈಲ್‌ ವಿಭಾಗದಲ್ಲಿ ಭಾರತದ ಉತ್ತಮ ಕುಸ್ತಿಪಟು ಭಜರಂಗ್‌ (65ಕೆ.ಜಿ), ಸಾಕ್ಷಿ (62ಕೆ.ಜಿ) ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಪೂಜಾ ದಂಡ (57ಕೆ.ಜಿ) ಭಾರತದ ಮಹಿಳಾ ಕುಸ್ತಿಪಟುಗಳ ಸಾಧನೆಯನ್ನು ಎಲ್ಲೆಡೆ ಹರಡಲಿದೆ.

ತಂಡ: ಫ್ರೀ ಸ್ಟೈಲ್‌: ಸಂದೀಪ್‌ ತೋಮರ್‌ (57ಕೆ.ಜಿ),Sonba Tanaji Gongane (61ಕೆ.ಜಿ), ಭಜರಂಗ್‌ ಪುನಿಯಾ(65ಕೆ.ಜಿ), ಪಂಕಜ್‌ ರಾಣಾ(70ಕೆ.ಜಿ), ಜಿತೇಂದರ್‌ 74ಕೆ.ಜಿ), ಸಚಿನ್‌ ರಾಟಿ (79ಕೆ.ಜಿ), ಪವನ್‌ ಕುಮಾರ್‌ (86 ಕೆ.ಜಿ), ದೀಪಕ್‌(92ಕೆಜಿ),ಮೌಸಮ್‌ ಖತ್ರಿ (97ಕೆ.ಜಿ), ಸುಮಿತ್‌(125ಕೆ.ಜಿ), ಜಗ್ಮಿಂದರ್‌ ಸಿಂಗ್‌ (ಕೋಚ್‌)

ಮಹಿಳಾ ವಿಭಾಗ: ರೀತು ಪೊಗಟ್‌ (50 ಕೆ.ಜಿ), ಪಿಂಕಿ (53ಕೆ.ಜಿ), ಸೀಮಾ (55ಕೆ.ಜಿ), ಪೂಜಾ ದಂಡ (57ಕೆ.ಜಿ), ಸಂಗೀತಾ (59ಕೆ.ಜಿ), ಸಾಕ್ಷಿ ಮಲ್ಲಿಕ್‌ (62ಕೆ.ಜಿ), ರಿತು(65ಕೆ.ಜಿ), ನವ್‌ಜೋತ್‌ ಕೌರ್‌ (68ಕೆ.ಜಿ), ರಜಿನಿ(72 ಕೆ.ಜಿ), ಕಿರಣ್‌ (76ಕೆ.ಜಿ), ಕುಲ್‌ದೀಪ್‌ ಮಲ್ಲಿಕ್‌(ಕೋಚ್‌).

ಗ್ರಿಕೊ ರೋಮನ್‌: ವಿಜಯ್‌ (55ಕೆ.ಜಿ), ಜ್ಞಾನೇಂದರ್‌ (60ಕೆ.ಜಿ), ಗೌರವ್‌ ಶರ್ಮಾ(63ಕೆ.ಜಿ), ಮನಿಷ್‌ (67ಕೆ.ಜಿ), ಕುಲ್‌ದೀಪ್‌ ಮಲ್ಲಿಕ್‌ (72ಕೆ.ಜಿ), ಗುರ್‌ಪ್ರೀತ್‌ ಸಿಂಗ್‌ (77ಕೆ.ಜಿ), ಹರ್‌ಪ್ರೀತ್‌ ಸಿಂಗ್‌ (82ಕೆಜಿ), ಮಂಜೀತ್‌ (87ಕೆ.ಜಿ), ಹರ್‌ದೀಪ್‌ (97ಕೆ.ಜಿ), ನವೀನ್‌ (130ಕೆ.ಜಿ), ಕುಲ್‌ದೀಪ್‌ ಸಿಂಗ್‌ (ಮುಖ್ಯ ಕೋಚ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT