ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಚಿನ್ನದತ್ತ ಅದಿತಿ ಹೆಜ್ಜೆ

Published 30 ಸೆಪ್ಟೆಂಬರ್ 2023, 14:11 IST
Last Updated 30 ಸೆಪ್ಟೆಂಬರ್ 2023, 14:11 IST
ಅಕ್ಷರ ಗಾತ್ರ

ಹಾಂಗ್‌ಝೌ (ಪಿಟಿಐ): ಮೂರನೇ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಅದಿತಿ ಅಶೋಕ್‌ ಅವರು ಏಷ್ಯನ್‌ ಕ್ರೀಡಾಕೂಟದ ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನದ ಪದಕದತ್ತ ಹೆಜ್ಜೆಯಿಟ್ಟಿದ್ದಾರೆ.

ಶನಿವಾರ ನಡೆದ ಮೂರನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಅದಿತಿ ಕೇವಲ 61 ಅವಕಾಶಗಳನ್ನು (11 ಅಂಡರ್‌) ತೆಗೆದುಕೊಂಡರು. ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗಿಂತ ಅವರು ಏಳು ಶಾಟ್‌ಗಳ ಲೀಡ್‌ ಗಳಿಸಿದ್ದಾರೆ.

ಬೆಂಗಳೂರಿನ ಅದಿತಿ ಮೂರು ಸುತ್ತುಗಳ ಬಳಿಕ 194 ಸ್ಕೋರ್‌ (22 ಅಂಡರ್‌) ಹೊಂದಿದ್ದಾರೆ. ಅರ್ಪಿಚಯಾ ಯುಬೊಲ್ (201) ಮತ್ತು ಚೀನಾದ ಲಿನ್ ಕ್ಸಿಯು (202) ಅವರು ಬಳಿಕದ ಸ್ಥಾನಗಳಲ್ಲಿದ್ದಾರೆ.

ಕಣದಲ್ಲಿರುವ ಭಾರತದ ಇತರ ಸ್ಪರ್ಧಿಗಳಾದ ಪ್ರಣವಿ ಅರಸ್ (71-68-70) ಮತ್ತು ಅವನಿ ಪ್ರಶಾಂತ್‌ (72-69-74) ಅವರು ಕ್ರಮವಾಗಿ 11 ಹಾಗೂ ಜಂಟಿ 19ನೇ ಸ್ಥಾನದಲ್ಲಿದ್ದಾರೆ.

ಅದಿತಿ ಅವರ ನಿಖರ ಆಟದ ನೆರವಿನಿಂದ ತಂಡ ವಿಭಾಗದಲ್ಲಿ ಭಾರತ ಮಹಿಳೆಯರು ಅಗ್ರಸ್ಥಾನಕ್ಕೇರಿದ್ದಾರೆ.

ಪುರುಷರ ವಿಭಾಗದಲ್ಲಿ ಭಾರತ, ಪದಕ ಗೆಲ್ಲುವ ಸಾಧ್ಯತೆ ಕ್ಷೀಣಿಸಿದೆ. ಅನಿರ್ಬನ್‌ ಲಾಹಿರಿ ಅವರು ಜಂಟಿ 17ನೇ ಸ್ಥಾನದಲ್ಲಿದ್ದಾರೆ. ಎಸ್‌ಎಸ್‌ಪಿ ಚೌರಾಸಿಯಾ ಹಾಗೂ ಖಾಲಿನ್‌ ಜೋಷಿ ಕ್ರಮವಾಗಿ ಜಂಟಿ 20 ಮತ್ತು ಮತ್ತು 24ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT