ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್‌ ಯುವ ಚೆಸ್‌: ಪ್ರತೀತಿಗೆ ಚಿನ್ನ

Published 12 ಜೂನ್ 2024, 4:48 IST
Last Updated 12 ಜೂನ್ 2024, 4:48 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಪ್ರತೀತಿ ಬೊರ್ಡೊಲಾಯಿ, ಕಜಕಸ್ತಾನದ ಅಲ್ಮಾಟಿಯಲ್ಲಿ ಮಂಗಳವಾರ ಮುಕ್ತಾಯಗೊಂಡ 26ನೇ ಯೂತ್ ಚೆಸ್‌ ಚಾಂಪಿಯನ್‌ಷಿಪ್‌ನ (ರ್‍ಯಾಪಿಡ್‌ ವಿಭಾಗ) ಬಾಲಕಿಯರ 12 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾಳೆ. ಈಕೆ ಏಳು ಸುತ್ತುಗಳಿಂದ 6.5 ಪಾಯಿಂಟ್ಸ್ ಸಂಗ್ರಹಿಸಿ ಅಜೇಯರಾಗುಳಿದಳು.

12 ವರ್ಷದೊಳಗಿನವರ ಮುಕ್ತ ವಿಭಾಗದಲ್ಲಿ ಕರ್ನಾಟಕದ ಸಿದ್ಧಾರ್ಥ ಪೂಂಜಾ ಏಳು ಸುತ್ತುಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿ ಬೆಳ್ಳಿಯ ಪದಕ ಗೆದ್ದುಕೊಂಡನು. ಬುಧವಾರ ಕ್ಲಾಸಿಕಲ್ ವಿಭಾಗದ ಟೂರ್ನಿ ಆರಂಭವಾಗಲಿದೆ. ಭಾರತ ರ್‍ಯಾಪಿಡ್ ವಿಭಾಗದಲ್ಲಿ ಇನ್ನೂ ಎರಡು ಪದಕಗಳನ್ನು ಗಳಿಸಿತು. ನಾರಾಯಣಿ ಮರಾಠೆ (8 ವರ್ಷದೊಳಗಿನವರ ವಿಭಾಗ) ಚಿನ್ನದ ಪದಕ ಗಳಿಸಿದರೆ, ಪೂಜಾಶ್ರೀ ಆರ್‌. 10 ವರ್ಷದೊಳಗಿನವರ ವಿಭಾಗದಲ್ಲಿ ಸ್ವರ್ಣ ಗೆದ್ದುಕೊಂಡಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT