ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಯಿಡಾದಲ್ಲಿ ಆರೋಗ್ಯ ಸೇತು ಇದ್ದರೆ ಕ್ರೀಡಾಂಗಣ ಪ್ರವೇಶ

Last Updated 29 ಜುಲೈ 2020, 7:41 IST
ಅಕ್ಷರ ಗಾತ್ರ

ನೋಯಿಡಾ: ನಾಲ್ಕು ತಿಂಗಳ ನಂತರ ನೋಯಿಡಾದಲ್ಲಿ ಕ್ರೀಡಾ ಚಟುವಟಿಕೆ ಆರಂಭವಾಗಿದೆ. ಅಲ್ಲಿನ ಕ್ರೀಡಾಂಗಣಗಳು ಸಾರ್ವಜನಿಕರಿಗೂ ಅಥ್ಲೀಟ್‌ಗಳಿಗೂ ತರಬೇತಿಗೆ ಮುಕ್ತವಾಗಿವೆ. ಆದರೆ ಕ್ರೀಡಾಂಗಣದ ಒಳಗೆ ಪ್ರವೇಶಿಸಬೇಕಾದರೆ ಸ್ವಂತ ನೀರಿನ ಬಾಟಲಿ ತೆಗೆದುಕೊಂಡು ಬರಬೇಕು ಎಂದು ಸೂಚಿಸಲಾಗಿದೆ. ಮಾತ್ರವಲ್ಲ, ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡುವುದು ಕಡ್ಡಾಯ ಎಂದೂ ಹೇಳಲಾಗಿದೆ. ನಿರ್ದಿಷ್ಟ ಸಮಯವನ್ನೂ ನಿಗದಿ ಮಾಡಲಾಗಿದೆ.

ನಗರದ ಸೆಕ್ಟರ್ 21ರಲ್ಲಿರುವ ಕ್ರೀಡಾಂಗಣ ನೋಯಿಡಾ ಪ್ರಾಧಿಕಾರದ ಆಧೀನದಲ್ಲಿದೆ. ಕೊರೊನಾ ಹಾವಳಿಯಿಂದಾಗಿ ಮಾರ್ಚ್ 15ರಂದು ಬಾಗಿಲು ಮುಚ್ಚಲು ಪ್ರಾಧಿಕಾರ ನಿರ್ಧರಿಸಿತ್ತು. ಬುಧವಾರ ಬಾಗಿಲು ತೆರೆದಿದ್ದು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅದಕ್ಕೆ ಬದ್ಧರಾಗಿರುವವರು ಮಾತ್ರ ಒಳಗೆ ಪ್ರವೇಶಿಸಬಹುದು ಎಂದು ತಿಳಿಸಿದೆ.

‘ಮುಂಜಾನೆ ಐದರಿಂದ ಬೆಳಿಗ್ಗೆ ಒಂಬತ್ತರ ವರೆಗೆ ಮತ್ತು ಸಂಜೆ ನಾಲ್ಕರಿಂದ ರಾತ್ರಿ ಎಂಟರ ವರೆಗೆ ಬಾಗಿಲು ತೆರೆದಿರುತ್ತದೆ. ಒಳಗೆ ಪ್ರವೇಶಿಸಲು ಬಯಸುವ ಕ್ರೀಡಾಪಟುಗಳು, ಕ್ರೀಡಾಂಗಣ ಆಡಳಿತದ ಸದಸ್ಯರು ಮತ್ತು ಸಾರ್ವಜನಿಕರ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಿ ಇರಬೇಕು. ಪ್ರತಿ ಹಂತದಲ್ಲೂ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಧರಿಸಿರಬೇಕು’ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಕ್ರಿಕೆಟ್, ಬ್ಯಾಡ್ಮಿಂಟನ್, ಸ್ಕ್ವಾಷ್‌, ಟೆನಿಸ್, ಗಾಲ್ಫ್ ಮತ್ತಿತರ ಕ್ರೀಡೆಗಳಲ್ಲಿ ಅಭ್ಯಾಸ ಮಾಡುವವರು ತಮ್ಮದೇ ಕಿಟ್‌ಗಳನ್ನು ತೆಗೆದುಕೊಂಡು ಬರಬೇಕು. ಯಾವ ಪರಿಕರವನ್ನೂ ಇತರರೊಂದಿಗೆ ಹಂಚಿಕೊಳ್ಳಬಾರದು. ಸ್ಯಾನಿಟೈಜರ್ ಕೂಡ ಅವರ ಬಳಿ ಇರಬೇಕು ಎಂದು ಸೂಚಿಲಾಗಿದೆ. ಸ್ಮಾರ್ಟ್ ಫೋನ್‌ ಇಲ್ಲದವರು ಕ್ರೀಡಾಂಗಣದೊಳಗೆ ಪ್ರವೇಶಿಸುವುದು ಹೇಗೆ ಎಂಬುದಕ್ಕೆ ಮಾರ್ಗದರ್ಶಿ ಸೂತ್ರಗಳಲ್ಲಿ ಸ್ಪಷ್ಟ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT