ಮೆಲ್ಬರ್ನ್: ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಗಾಲ್ ಅವರು ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನಲ್ಲೇ ಹೊರಬಿದ್ದರು.

26 ವರ್ಷ ವಯಸ್ಸಿನ ನಗಾಲ್ 3-6, 1-6, 5-7ರಿಂದ ವಿಶ್ವದ 25ನೇ ಕ್ರಮಾಂಕದ ಥಾಮಸ್ ಮಚಾಕ್ (ಝೆಕ್ ರಿಪಬ್ಲಿಕ್) ಅವರಿಗೆ ಶರಣಾದರು.

ಕಳೆದ ವರ್ಷ ಕ್ವಾಲಿಫೈಯರ್ಸ್ನಲ್ಲಿ ಗೆದ್ದು, ಮುಖ್ಯಸುತ್ತಿನಲ್ಲಿ ತಮಗಿಂತ ಉನ್ನತ ಕ್ರಮಾಂಕದ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸಿ ಎರಡನೇ ಸುತ್ತು ತಲುಪಿದ್ದ ನಗಾಲ್ ಈ ಬಾರಿ ನಿರಾಸೆ ಮೂಡಿಸಿದರು. ಅವರ ನಿರ್ಗಮನದೊಂದಿಗೆ ಸಿಂಗಲ್ಸ್ನಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಆದರೆ, ಡಬಲ್ಸ್ನಲ್ಲಿ ಭಾರತದ ನಾಲ್ವರು ಸ್ಪರ್ಧೆಯಲ್ಲಿದ್ದಾರೆ.

ಪುರುಷರ ಡಬಲ್ಸ್ನ ಹಾಲಿ ಚಾಂಪಿಯನ್ ಭಾರತದ ರೋಹನ್ ಬೋಪಣ್ಣ ಅವರು ಈ ಬಾರಿ ಕೊಲಂಬಿಯಾದ ನಿಕೋಲಸ್ ಬ್ಯಾರಿಯೆಂಟೋಸ್ ಅವರೊಂದಿಗೆ ಕಣಕ್ಕೆ ಇಳಿಯುವರು. 44 ವರ್ಷ ವಯಸ್ಸಿನ ಬೋಪಣ್ಣ 2024ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಕಿರೀಟ ಗೆದ್ದಿದ್ದರು.

ಭಾರತದ ಯೂಕಿ ಭಾಂಬ್ರಿ, ಎನ್. ಶ್ರೀರಾಮ್ ಬಾಲಾಜಿ ಮತ್ತು ರಿತ್ವಿಕ್ ಬೊಲ್ಲಿಪಲ್ಲಿ ಅವರು ತಮ್ಮ ಜೊತೆಗಾರರೊಂದಿಗೆ ಸ್ಪರ್ಧಾ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.