ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಅವಿ ಬಸಕ್‌, ಜೇಡ್‌ ಅನಿಲ್‌ಗೆ ಪ್ರಶಸ್ತಿ

ರಾಜ್ಯ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌
Published 26 ಜುಲೈ 2023, 19:52 IST
Last Updated 26 ಜುಲೈ 2023, 19:52 IST
ಅಕ್ಷರ ಗಾತ್ರ

ಬಳ್ಳಾರಿ: ಬೆಂಗಳೂರಿನ ಅವಿ ಬಸಕ್‌ ಮತ್ತು ಮೈಸೂರಿನ ಜೇಡ್‌ ಅನಿಲ್‌, ಮಂಗಳವಾರ ನಗರದ ಜಿಲ್ಲಾ ಕ್ರೀಡಾ ಸಮುಚ್ಚಯದಲ್ಲಿ ನಡೆದ ಯೋನೆಕ್ಸ್ ಸನ್‌ರೈಸ್ ರಾಜ್ಯ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ 17 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿಗಳನ್ನು ಗೆದ್ದುಕೊಂಡರು.

ಅವಿ ಬಸಕ್ ಬಾಲಕರ ವಿಭಾಗದ ಫೈನಲ್‌ನಲ್ಲಿ 21–17, 21–13 ರಿಂದ ಪ್ರತೀಕ್‌ ಕೌಂಡಿಲ್ಯ ಅವರನ್ನು ಪರಾಭವಗೊಳಿಸಿದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಮೈಸೂರಿನ ಜೇಡ್ ಅನಿಲ್ 21–18, 21–15ರಲ್ಲಿ ನೇರ ಆಟಗಳಿಂದ ಬೆಂಗಳೂರಿನ ಸುಹೀನಾ ರಾಯ್ ಅವರನ್ನು ಸೋಲಿಸಿದರು.

15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಪ್ರತೀಕ್ ಕೌಂಡಿಲ್ಯ 18–21, 21–14, 21–16 ರಲ್ಲಿ 2–1 ರಿಂದ ಪ್ರಣವ್ ಎಂ. ಅವರನ್ನು ಮಣಿಸಿ ಚಾಂಪಿಯನ್ ಆದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಸುಹೀನಾ ರಾಯ್ 21-13, 23-21 ರಲ್ಲಿ ನೇರ ಗೇಮ್‌ಗಳಿಂದ ಅದಿತಿ ದೀಪಕ್ ರಾಜ್ ವಿರುದ್ದ ಗೆದ್ದರು.

ಮಿಶ್ರ ಡಬಲ್ಸ್‌: 15 ವರ್ಷದೊಳಗಿನವರ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಅಮಿತರಾಜ್ ಮತ್ತು ಇಷಿಕಾ ಕಶ್ಯಪ್ ಅವರು 16-21, 21-14, 21-10 ರಲ್ಲಿ 2–1 ಗೇಮ್‌ಗಳಿಂದ ಪ್ರದ್ಯುಮ್ನ– ಲಕ್ಷ್ಯಾ ರಾಜೇಶ್ ಅವರನ್ನು ಮಣಿಸಿದರು.

17 ವರ್ಷದೊಳಗಿನವರ ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಸುಮಿತ್ ಎ.ಆರ್.– ಅನ್ವಿತಾ ವಿಜಯ್ ಜೋಡಿ 21–13, 21–13ರಲ್ಲಿ ಸಿದ್ದಾರ್ಥ ಗುಂಟೂರಿ– ಮೌನಿತಾ ಎ.ಎಸ್. ವಿರುದ್ದ  ನೇರ ಆಟಗಳಲ್ಲಿ ಗೆಲುವನ್ನು ದಾಖಲಿಸಿದರು.

15 ವರ್ಷದೊಳಗಿನ ಬಾಲಕರ ಡಬಲ್ಸ್‌ನಲ್ಲಿ ಹಾರ್ದಿಕ್‌ ದಿವ್ಯಾಂಶ್–ನಟರಾಜ್ ಅವರು 15–21, 21–17, 21–18 ರಿಂದ ಬೆಂಗಳೂರಿನ ಅವಳಿ ಸೋದರರಾದ ಎಸ್.ಪುನೀತ್– ಎಸ್.ಪವನ್ ಜೋಡಿ ವಿರುದ್ದ ಜಯಗಳಿಸಿದರು.

17 ವರ್ಷದೊಳಗಿನ ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಕ್ರಿಸ್ ಅಂಜೆನ್– ಸುಮಿತ್ 21–17, 21–9 ರಿಂದ ಕ್ಷಿತಿಜ್ ದೀಪಕ್– ಸಂಕೀರ್ತ್ ಪಿ. ಅವರನ್ನು ಸೋಲಿಸಿದರು. ಬಾಲಕಿಯರ ಡಬಲ್ಸ್‌ ಫೈನಲ್‌ನಲ್ಲಿ ದಿಯಾ ಭೀಮಯ್ಯ– ಜೇಡ್ ಅನಿಲ್ 21–16, 21–19 ರಿಂದ ವೃದ್ಧಿ ಪೊನ್ನಮ್ಮ– ಅದಿತಿ ದೀಪಕ್‌ರಾಜ್ ವಿರುದ್ಧ ಜಯಗಳಿಸಿದರು.

ಉದ್ಯಮಿ ಎಸ್.ಕೆ.ಸಿಂಗ್, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಅಸೋಸಿಯೇಷನ್ ಅಧ್ಯಕ್ಷ ಮನೋಜ್ ಕುಮಾರ್‌, ಕಾರ್ಯದರ್ಶಿ ರಾಜೇಶ್,  ಜಿಲ್ಲಾ ಅಧ್ಯಕ್ಷ ಎಂ.ಅಹಿರಾಜ್, ಉಪಾಧ್ಯಕ್ಷ ರಾಮಧೂತ್ ಬಾಬು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯು, ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಜಿಲ್ಲಾ ಆಡಳಿತದ ಸಹಕಾರದಿಂದ ಟೂರ್ನಿಯನ್ನು ಹಮ್ಮಿಕೊಂಡಿದ್ದು, 420 ಆಟಗಾರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT