ಅಯೋವಾ (ಅಮೆರಿಕ): ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ ಅಮೆರಿಕ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಮಹಿಳೆಯರ ಸಿಂಗಲ್ಸ್ನಲ್ಲಿ ತನ್ವಿ ಶರ್ಮಾ ರನ್ನರ್ಸ್ಅಪ್ ಆದರು.

ನಾಲ್ಕನೇ ಶ್ರೇಯಾಂಕದ, ಕನ್ನಡಿಗ ಆಯುಷ್ ಅವರು ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ 21–18, 21–13ರ ನೇರ ಗೇಮ್ಗಳಿಂದ ಮೂರನೇ ಶ್ರೇಯಾಂಕದ ಬ್ರಯನ್ ಯಾಂಗ್ ಅವರನ್ನು ಮಣಿಸಿದರು. ಈ ಮೂಲಕ, ತಮ್ಮ ಚೊಚ್ಚಲ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ರೋಚಕವಾಗಿ ಸಾಗಿದ ಮೊದಲ ಗೇಮ್ನಲ್ಲಿ ಒಂದು ಹಂತದಲ್ಲಿ 16–16ರಿಂದ ಉಭಯ ಆಟಗಾರರು ಸಮಬಲದ ಹೋರಾಟ ಸಾಧಿಸಿದ್ದರು. ಕೊನೆಯಲ್ಲಿ ಹಿಡಿತ ಸಾಧಿಸಿದ ಭಾರತದ ಆಟಗಾರ, ಮೇಲುಗೈ ಸಾಧಿಸಿದರು. ಎರಡನೇ ಗೇಮ್ನಲ್ಲಿಯೂ ಎದುರಾಳಿಯ ಸವಾಲನ್ನು ಸಮರ್ಥವಾಗಿ ಎದುರಿಸಿದ ಆಯುಷ್, ತಮ್ಮ ಕ್ರಾಸ್–ಕೋರ್ಟ್ ಪಂಚ್ಗಳೊಂದಿಗೆ ಗೆಲುವು ಸಾಧಿಸಿದರು. ಪಂದ್ಯವು 47 ನಿಮಿಷಗಳಲ್ಲಿಯೇ ಮುಕ್ತಾಯಗೊಂಡಿತು.

ವಿಶ್ವ ಜೂನಿಯರ್ ಕಂಚು ವಿಜೇತ, ಉಡುಪಿಯ ಆಯುಷ್ ಅವರಿಗೆ ಯಾಂಗ್ ವಿರುದ್ಧ ಮೂರನೇ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಮಲೇಷ್ಯಾ ಓಪನ್ ಹಾಗೂ ತೈಪೆ ಓಪನ್ ಟೂರ್ನಿಯಲ್ಲಿಯೂ ಯಾಂಗ್ ವಿರುದ್ಧ ಗೆಲುವು ಸಾಧಿಸಿದ್ದರು.

‘ಸೀನಿಯರ್ ವಿಭಾಗದಲ್ಲಿ ಇದು ನನ್ನ ಮೊದಲ ಪ್ರಶಸ್ತಿ. ಟೂರ್ನಿಯಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಮುಂದಿನ ವಾರ ಆರಂಭಗೊಳ್ಳಲಿರುವ ಕೆನಡಾ ಓಪನ್ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ’ ಎಂದು 20 ವರ್ಷ ವಯಸ್ಸಿನ ಆಯುಷ್ ಪ್ರತಿಕ್ರಿಯಿಸಿದರು.

ವಿಶ್ವ ರ್ಯಾಕಿಂಗ್ನಲ್ಲಿ 34ನೇ ಸ್ಥಾನದಲ್ಲಿರುವ ಆಯುಷ್ ಸೆಮಿಫೈನಲ್ನಲ್ಲಿ ವಿಶ್ವದ ಆರನೇ ಕ್ರಮಾಂಕದ ಚೌ ಟಿಯೆನ್ ಚೆನ್ (ಚೀನಾ ತೈಪೆ) ಅವರಿಗೆ ಆಘಾತ ನೀಡಿದ್ದರು.

ತನ್ವಿ ರನ್ನರ್ಸ್–ಅಪ್: 16 ವರ್ಷ ವಯಸ್ಸಿನ ಶ್ರೇಯಾಂಕರಹಿತ ಆಟಗಾರ್ತಿ ತನ್ವಿ, 11–21, 21–16, 10-21ರಿಂದ ಆತಿಥೇಯ ರಾಷ್ಟ್ರದ ಬೀವೆನ್ ಜಾಂಗ್ ಎದುರು ಪರಾಭವಗೊಂಡರು.

‘ಟೂರ್ನಿಯಲ್ಲಿನ ನನ್ನ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ. ಇದು ನನ್ನ ಮೊದಲ ಸೂಪರ್ 300 ಫೈನಲ್ ಆಗಿದ್ದು, ಸಂತೋಷವಾಗಿದೆ’ ಎಂದು ತನ್ವಿ ಪ್ರತಿಕ್ರಿಯಿಸಿದ್ದಾರೆ.

ತನ್ವಿ ಅವರು, ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ ತಲುಪಿದ ಭಾರತದ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನೂ ನಿರ್ಮಿಸಿದ್ದರು.

ವಿಶ್ವದ 66ನೇ ರ್ಯಾಂಕ್ನ ಆಟಗಾರ್ತಿಯಾಗಿರುವ ತನ್ವಿ, ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.