ಹುಬ್ಬಳ್ಳಿ: ಆರಂಭದ ನಾಲ್ಕು ಲ್ಯಾಪ್‌ಗಳ ಬಳಿಕ ಮುನ್ನಡೆ ಪಡೆದುಕೊಂಡ ವಿಜಯಪುರ ಕ್ರೀಡಾನಿಲಯದ ಬಸವರಾಜ ಮಡ್ಡಿ ಇಲ್ಲಿನ ಗಬ್ಬೂರು-ಬಿಡ್ನಾಳ್ ವರ್ತುಲ ರಸ್ತೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಗುಂಪು ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಶನಿವಾರ ಬೆಳಿಗ್ಗೆ ನಡೆದ 18 ವರ್ಷದ ಒಳಗಿನವರ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಬಸವರಾಜ, ಒಂದು ಗಂಟೆ 15ನಿಮಿಷ 29 ಸೆಕೆಂಡ್ ಗಳಲ್ಲಿ ಗುರಿ ತಲುಪಿದರು.

ವಿಜಯಪುರದ ಮುತ್ತಪ್ಪ ನವಲಹಳ್ಳಿ ಬೆಳ್ಳಿ ಪದಕ ಪಡೆದರೆ, ಸಚಿನ್ ರಂಜಣಗಿ ಕಂಚು ತಮ್ಮದಾಗಿಸಿಕೊಂಡರು.

ಒಟ್ಟು 50 ಕಿ.ಮೀ. ಸೈಕಲ್ ತುಳಿಯಿವ ಸ್ಪರ್ಧೆ ಇದಾಗಿತ್ತು.

ಇದೇ ವಯೋಮಾನದ ಬಾಲಕಿಯರ ವಿಭಾಗದ ಸ್ಪರ್ಧೆ ಈಗ ಆರಂಭವಾಗಿದೆ. ಬಾಲಕಿಯರಿಗೆ 30 ಕಿ.ಮೀ. ಗುರಿ ನೀಡಲಾಗಿದೆ.

ಸೈಕ್ಲಿಸ್ಟ್‌ಗೆ ಏಟು: ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಆಯೋಜನೆಯಾಗಿದೆ. ಸಿಮೆಂಟ್ ರಸ್ತೆಯ ಮೇಲೆ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಬಾಲಕರ ವಿಭಾಗದ ಸ್ಪರ್ಧೆಯ ಅಂತಿಮ ಲ್ಯಾಪ್ ಬಾಕಿ ಇದ್ದಾಗ ಸೈಕ್ಲಿಸ್ಟ್ ಬಿದ್ದ ಕಾರಣ ಭುಜದ ಭಾಗಕ್ಕೆ ಪೆಟ್ಟು ಬಿದ್ದಿವೆ. ಸ್ಥಳದಲ್ಲಿಯೇ ಇದ್ದ ಅಂಬುಲೆನ್ಸ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.